ನ.18 ಮತ್ತು 19 ರಂದು ಕೊಡಗು ಜಿಲ್ಲೆಯ ವಿವಿಧೆಡೆ ವಿದ್ಯುತ್ ವ್ಯತ್ಯಯ
admincoorgdaily

ಮಡಿಕೇರಿ:-ಮೈಸೂರಿನ ಕಡಕೋಳದಲ್ಲಿ ನೂತನವಾಗಿ ನಿರ್ಮಿಸುತ್ತಿರುವ 2*500 ಎಂವಿಎ, 400 ಕೆವಿ ವಿದ್ಯುತ್ ಉಪಕೇಂದ್ರ ಮತ್ತು ಸಂಬಂಧಿತ 400 ಕೆ.ವಿ. ವಿದ್ಯುತ್ ಉಪಕೇಂದ್ರ ಮತ್ತು ಸಂಬಂಧಿತ 400 ಕೆ.ವಿ. ಮಾರ್ಗದ ಕಾಮಗಾರಿಯ ಪ್ರಯುಕ್ತ ಹಾಲಿ ಇರುವ 220 ಕೆ.ವಿ. ಬಸ್ತಿಪುರ, ತಮಡಹಳ್ಳಿ (ಹುಣಸೂರು) ವಿದ್ಯುತ್ ಮಾರ್ಗಕ್ಕೆ ತಂತಿ ಎಳೆಯುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ 220 ಕೆ.ವಿ. ಕುಶಾಲನಗರ ವಿದ್ಯುತ್ ಉಪಕೇಂದ್ರದಿಂದ ಸರಬರಾಜಾಗುವ ವಿದ್ಯುತ್ ಮಾರ್ಗವನ್ನು ಸ್ಥಗಿತಗೊಳಿಸಬೇಕಾಗಿರುವುದರಿಂದ ಇದರ ವ್ಯಾಪ್ತಿಗೆ ಬರುವ 66/11 ಕೆ.ವಿ. ಮಡಿಕೇರಿ ವಿದ್ಯುತ್ ಉಪಕೇಂದ್ರ ಹಾಗೂ ವಿರಾಜಪೇಟೆ ಉಪಕೇಂದ್ರದಿಂದ ಸರಬರಾಜಾಗುವ 33/11 ಕೆ.ವಿ. ಮೂರ್ನಾಡು ಫೀಡರ್ ಮಾರ್ಗಗಳಲ್ಲಿ ನವೆಂಬರ್, 18 ಮತ್ತು 19 ರಂದು ಬೆಳಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಮಡಿಕೇರಿ ನಗರ, ರಾಜಾಸೀಟ್, ಗದ್ದಿಗೆ, ಕೋಟೆ, ಕುಂಡಾಮೇಸ್ತ್ರಿ, ಓಂಕಾರೇಶ್ವರ, ಜಿ.ಟಿ.ರಸ್ತೆ, ಕೆ.ಎಸ್.ಆರ್.ಟಿ.ಸಿ., ಮೇಕೇರಿ, ಭಾಗಮಂಡಲ, ಬೋಯಿಕೇರಿ, ಸಂಪಾಜೆ, ಗಾಳಿಬೀಡು, ಮಕ್ಕಂದೂರು, ಹೆಬ್ಬೆಟ್ಟಗೇರಿ, ಕೆ. ಬಾಡಗ, ತಾಳತ್ತಮನೆ, ಬೆಟ್ಟಗೇರಿ, ಚೆಟ್ಟಿಮಾನಿ, ಚೇರಂಬಾಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಹಾಗೂ 33 ಕೆ.ವಿ. ಮೂರ್ನಾಡು, ಮರಗೋಡು, ಕುಂಜಿಲ, ಎಮ್ಮೆಮಾಡು, ಬಲ್ಲಮಾವಟಿ, ಹಾಕತ್ತೂರು, ಹೊಸ್ಕೇರಿ, ಹೊದ್ದೂರು, ನರಿಯಂದಡ, ನಾಪೋಕ್ಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.
ಹಾಗೆಯೇ 220/66/11 ಕೆ.ವಿ. ವಿದ್ಯುತ್ ಸ್ವೀಕರಣಾ ಕೇಂದ್ರ ಕುಶಾಲನಗರ ಮತ್ತು 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಸುಂಟಿಕೊಪ್ಪ ಮತ್ತು ಮಾದಾಪುರದಿಂದ ಹೊರಹೊಮ್ಮುವ ಮಾರ್ಗಗಳಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ನವೆಂಬರ್, 18 ಮತ್ತು 19 ರಂದು ಬೆಳಗ್ಗೆ 10 ರಿಂದ ಸಂಜೆ 05.00 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಈ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಕುಶಾಲನಗರ ಟೌನ್, ನಂಜರಾಯಪಟ್ಟಣ, ಗುಡ್ಡೆಹೊಸೂರು, ಹೆಬ್ಬಾಲೆ, ಕಣಿವೆ, ಮಲ್ಲೇನಹಳ್ಳಿ, ಭುವನಗಿರಿ, ಇಂಡಸ್ಟ್ರಿಯಲ್ ಏರಿಯಾ, ಕೂಡಿಗೆ, ಕೂಡುಮಂಗಳೂರು, ಶಿರಂಗಾಲ, ಕಾನ್ಬೈಲು, ಅಂದಗೋವೆ, ನಾಕೂರು, ಹಾದ್ರೆ ಹಿರೂರು, ಹಟ್ಟಿಹೊಳೆ, ಗರ್ವಾಲೆ, ಗರಗಂದೂರು, ಕಾಂಡನಕೊಲ್ಲಿ, ಕುಂಬೂರು, ಮಾದಾಪುರ, ಪನ್ಯ, ಚೆಟ್ಟಳ್ಳಿ, ನಾಕೂರು ಶಿರಂಗಾಲ, ವಾಲ್ನೂರು ತ್ಯಾಗತ್ತೂರು, ಪೊನ್ನತ್ಮೊಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.
ಹಾಗೆಯೇ ಗೋಣಿಕೊಪ್ಪ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ಈ5 ಕೆ. ಬಾಡಗ ಫೀಡರ್ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ನವೆಂಬರ್, 18 ರಂದು ಬೆಳಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಕೆ.ಬಾಡಗ, ಆಲಂದೋಡು, ಹೆರ್ಮಾಡು, ಕುಮಟೂರು, ನಾಲ್ಕೇರಿ, ಕೆ.ಎಂ.ಕೊಲ್ಲಿ, ಪಲ್ಲೇರಿ ಹಾಗೂ ಎಫ್15 ಬೆಕ್ಕೆಸೊಡ್ಲೂರು ಫೀಡರ್ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ನವೆಂಬರ್, 19 ರಂದು ಬೆಳಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಕಾನೂರು, ಬೆಕ್ಕೆಸೊಡ್ಲೂರು, ಕೋತೂರು, ಬಲ್ಯಮಂಡೂರು, ವಡ್ಡರಮಾಡು, ನಿಡುಗುಂಬ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.
ಹಾಗೆಯೇ ಸೋಮವಾರಪೇಟೆ ಉಪವಿಭಾಗದ 66 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಮಾರ್ಗಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ನವೆಂಬರ್, 18 ಮತ್ತು 19 ರಂದು ಬೆಳಗ್ಗೆ 06 ರಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಎಫ್4 ಸೋಮವಾರಪೇಟೆ ಟೌನ್ ಫೀಡರ್, ಎಫ್6 ಅಬ್ಬೂರುಕಟ್ಟೆ ಫೀಡರ್–ಅಬ್ಬೂರುಕಟ್ಟೆ, ನೇರುಗಳಲೆ, ತಣ್ಣೀರುಹಳ್ಳಿ, ಅರೆಯೂರು,ಹೊಸಳ್ಳಿ, ಎಫ್3 ಐಗೂರು- ಐಗೂರು, ಒಳಗುಂದ, ಹೊಸತೋಟ, ಗರಗಂದೂರು, ಎಫ್5 ಕಾರ್ಕಳ್ಳಿ, ಎಫ್2 ಶಾಂತಳ್ಳಿ ಫೀಡರ್, ಎಫ್1 ದೊಡ್ಡಮಳ್ತೆ ಫೀಡರ್, ದೊಡ್ಡಮಳ್ತೆ, ಹಣಕೋಡು, ಗೆಜ್ಜೆಹಣಕೋಡು, ಚಿಕ್ಕತೋಳೂರು, ಕೂಗೆಕೋಡಿ, ಯಡೂರು, ತಾಕೇರಿ, ಕಿರಗಂದೂರು, ಸೋಮವಾರಪೇಟೆ ಪಟ್ಟಣ, ಹಾನಗಲ್ಲು, ನಗರೂರು,ದುದ್ದುಗಲ್ಲು, ಗಾಂಧೀನಗರ, ಐಗೂರು,ಸಜ್ಜಳ್ಳಿ, ಹೊಸತೋಟ, ಗರಗಂದೂರು,ಕಾಜೂರು, ನೆಗಳ್ಳಿ-ಕಾರ್ಕಳ್ಳಿ, ನೇರುಗಳಲೆ, ಯಲಕನೂರು, ಹೊಸಳ್ಳಿ, ಎಂ.ಜಿ.ರಸ್ತೆ, ಬಾಣಾವಾರ ರಸ್ತೆ, ಬೀದಳ್ಳಿ, ಜಕ್ನಳ್ಳಿ, ಕುಡಿಗಾಣ, ಕೊತ್ನಳ್ಳಿ, ಕುಸುಜೂರು, ಕಾರೆಕೊಪ್ಪ, ಹೊಸತೋಟ, ಎಫ್2 ಆಲೂರು ಸಿದ್ಧಾಪುರ ಫೀಡರ್, ಎಫ್1 ಗೋಣಿಮಾರೂರು ಫೀಡರ್, ಎಫ್3 ಮಾಲಂಬಿ ಫೀಡರ್, ಎಫ್5 ಅಂಕನಹಳ್ಳಿ ಫೀಡರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.
ವಿರಾಜಪೇಟೆ ಉಪವಿಭಾಗದ 220 ಕೆ.ವಿ. ಎಂಯುಎಸ್ಎಸ್ ಕುಶಾಲನಗರ ಇಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ, ನವೆಂಬರ್, 18 ಮತ್ತು 19 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ವಿರಾಜಪೇಟೆ, ಸಿದ್ಧಾಪುರ, ಅಮ್ಮತ್ತಿ ಮತ್ತು ಪಾಲಿಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.