ಸೆ. 8ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
admincoorgdaily

ಮಡಿಕೇರಿ, ಸೆ. 5: 66/33/11 ಕೆ.ವಿ ಮಗ್ಗುಲ ವಿರಾಜಪೇಟೆ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ದಿನಾಂಕ 08.09.2026 ರಂದು ಬೆಳಗ್ಗೆ 10.00 ರಿಂದ ಸಂಜೆ 5.00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿರಾಜಪೇಟೆ ಉಪಕೇಂದ್ರದಿಂದ ಹೊರಹೊಮ್ಮುವ 33 ಕೆ.ವಿ ಮೂರ್ನಾಡು ಫೀಡರ್‌ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಮೂರ್ನಾಡು, ಮರಗೋಡು, ಹಾಕತ್ತೂರು, ಹೊಸಕೇರಿ, ಹೊದ್ದೂರು, ನರಿಯಂದಡ, ನಾಪೋಕ್ಲು, ಕುಂಜಿಲ, ಎಮ್ಮೆಮಾಡು, ಬಲ್ಲಮಾವಟಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಚಾವಿಸನಿನಿ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಪ್ರಕಟಣೆಯಲ್ಲಿ ತಿಳಿಸಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ.