8 ವರ್ಷಗಳ ಬಳಿಕ ಖಾಸಗಿ ಬಸ್ ಪ್ರಯಾಣ ದರ ಏರಿಕೆ ನ. 11ರಿಂದ ಶೇ. 15ರಿಂದ 20ರಷ್ಟು ಹೆಚ್ಚಳ
admincoorgdaily

ಮಡಿಕೇರಿ: ಕಳೆದ 8 ವರ್ಷಗಳಿಂದ ಸ್ಥಿರವಾಗಿದ್ದ ಕೊಡಗು ಜಿಲ್ಲೆಯ ಖಾಸಗಿ ಬಸ್ ಪ್ರಯಾಣ ದರ ಇದೀಗ ಏರಿಕೆಯಾಗಲಿದೆ. ನವೆಂಬರ್ 11ರಿಂದ ದರ ಶೇ. 15ರಿಂದ 20ರಷ್ಟು ಹೆಚ್ಚಾಗಲಿದೆ ಎಂದು ಕೊಡಗು ಬಸ್ ಮಾಲೀಕರ ಸಂಘದ ಅಧ್ಯಕ್ಷ ಜನಾರ್ಧನ್ ಪ್ರಭು ತಿಳಿಸಿದ್ದಾರೆ.
ಡೀಸೆಲ್, ಬಿಡಿಭಾಗ, ವಿಮೆ, ತೆರಿಗೆ ಮತ್ತು ಸಿಬ್ಬಂದಿ ವೇತನ ಏರಿಕೆಯಿಂದ ನಿರ್ವಹಣಾ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಕೆಎಸ್‌ಆರ್‌ಟಿಸಿ ಈಗಾಗಲೇ ಶೇ. 23ರಷ್ಟು ದರ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.
ಕೋವಿಡ್‌ಗೂ ಮೊದಲು ಜಿಲ್ಲೆಯಲ್ಲಿ 160ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಓಡಾಡುತ್ತಿದ್ದವು. ನಂತರ 50 ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದೆ. ಈಗ ಕೇವಲ 110 ಬಸ್‌ಗಳು ಮಾತ್ರ ಸಂಚರಿಸುತ್ತಿವೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪೂಣಚ್ಚ, ಪ್ರಮುಖರಾದ ಜಯಂತ್, ಸುಬ್ರಮಣ್ಯ, ಉಮೇಶ್, ದಿಲನ್ ಚಂಗಪ್ಪ ಉಪಸ್ಥಿತರಿದ್ದರು.