ಕೊಡಗು ವಿವಿ ಪರೀಕ್ಷಾಂಗ ವಿಭಾಗದ ನೂತನ ಕುಲಸಚಿವರಾಗಿ ಪ್ರೊ. ಭಾರತಿ ಹಿರೇಮಠ ಅಧಿಕಾರ ಸ್ವೀಕಾರ
admincoorgdaily

ಕುಶಾಲನಗರ : ಕೊಡಗು ವಿಶ್ವ ವಿದ್ಯಾಲಯದ ಪರೀಕ್ಷಾಂಗ ವಿಭಾಗದ ನೂತನ ಕುಲ ಸಚಿವರಾಗಿ ಪ್ರೊ.ಭಾರತಿ ಹಿರೇಮಠ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಕುಲಸಚಿವರಾಗಿದ್ದ ಪ್ರೊ.ಎಂ.ಸುರೇಶ್ ಅವರನ್ನು ಅವರ ಮಾತೃಸಂಸ್ಥೆಯಾದ ಮೈಸೂರಿನ ಯುವರಾಜ ಕಾಲೇಜಿನ ಅರ್ಥ ಶಾಸ್ತ್ರ ವಿಭಾಗಕ್ಕೆ ಮರಳಿಸಲಾಗಿದೆ.
ಪ್ರೊ.ಭಾರತಿ ಹಿರೇಮಠ ಇವರು ಮೈಸೂರು ವಿವಿಯ ರಾಜ್ಯಶಾಸ್ತ್ರ ವಿಭಾಗ ಹಾಗೂ ಮೈಸೂರು ಮಹಾರಾಜ ಕಾಲೇಜಿನ ಅಂತರ ರಾಷ್ಟ್ರೀಯ ಸಂಬಂಧಗಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.