Kodagu

ವಿರಾಜಪೇಟೆಯಲ್ಲಿ ಅಯ್ಯಪ್ಪ ಭಕ್ತರಿಂದ ಪ್ರತಿಭಟನೆ

admincoorgdaily

ವಿರಾಜಪೇಟೆಯಲ್ಲಿ ಅಯ್ಯಪ್ಪ ಭಕ್ತರಿಂದ ಪ್ರತಿಭಟನೆ
ವಿರಾಜಪೇಟೆ:
ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ತಿರೂರು ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆ ಯ ಕಾರ್ಯಕ್ರಮ ದಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ಮತ್ತು ಶಭರಿಮಲೆಯಲ್ಲಿರುವ ಮಾಳಿಗತಮ್ಮ ದೇವಿಯ ಬಗ್ಗೆ ಅವೈಚವಾಗಿ ನಿಂದನೆ ಮಾಡಿ ಅವಹೇಳನ ಮಾಡುವ ರೀತಿಯ ಭಾಷಣ ಮಾಡಿದ ಕಮುನಿಷ್ಟ್ ಪಕ್ಷದ ಮುಖಂಡ ಸನ್ನಿ ಕಫಿಕಾಡ್ ವಿರುದ್ಧ ವಿರಾಜಪೇಟೆ ಶ್ರೀ ಮಲೆತಿರಕೆ ಅಯ್ಯಪ್ಪ ದೇವಾಲಯದ ಅಯ್ಯಪ್ಪ ಭಕ್ತರು ಹಾಗೂ ವಿವಿಧ ಹಿಂದೂ ಧರ್ಮದ ಸದಸ್ಯರು ಸುರೇಶ್ ಅವರ ನಾಯಕತ್ವ ದಲ್ಲಿ ವಿರಾಜಪೇಟೆ ನಗರದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿ ದ ಸುರೇಶ್ ಅವರು ಹಿಂದೂಗಳ ಪವಿತ್ರ ಸ್ಥಳ ಶಬರಿಮಲೆ ಅಯ್ಯಪ್ಪ ಸನ್ನಿಧಿ.
ಈ ಸನ್ನಿದಿಗೆ ಕೋಟ್ಯಂತರ ಭಕ್ತರು ವರ್ಷವಿಡೀ ಭೇಟಿ ನೀಡುತ್ತಾರೆ.
ಹಿಂದೂಗಳ ಭಾವನಾತ್ಮಕ ಸಂಬಂಧವನ್ನು ದಕ್ಕೆ ಮಾಡುವ ಉದ್ದೇಶ ದಿಂದ ಈ ವ್ಯಕ್ತಿ ಈ ರೀತಿಯಲ್ಲಿ ಭಾಷಣ ಮಾಡಿದ್ದಾರೆ.
ಈತನ ಮೇಲೆ ಧಾರ್ಮಿಕ ವಿರೋಧಿ ಕಾಯ್ದೆಯ ಪ್ರಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಟಿ.ವಿ.ಅನಿಲ್ ಕುಮಾರ್ ಮಾತನಾಡಿ ಶಬರಿಮಲೆ ಅಯ್ಯಪ್ಪ ದೇವರ ಮೇಲೆ ಈ ರೀತಿಯ ಅಪಪ್ರಚಾರ ಇದು ಮೊದಲಲ್ಲ ಅನೇಕ ಬಾರಿ ಈ ರೀತಿಯ ಹಿಂದೂಗಳ ಭಾವನೆ ಗಳಿಗೆ ತೊಂದರೆ ನೀಡುವ ಅನೇಕ ಕಿಡಿ ಗೇಡಿಗಳು ಇದ್ದಾರೆ, ಸಾರ್ವಜನಿಕ ಶಾಲೆ ಯಲ್ಲಿ ಪುಟ್ಟ ಮಕ್ಕಳಿಗೆ ಈ ರೀತಿಯ ದೇವರ ಮತ್ತು ದೇವಿಯ ಬಗ್ಗೆ ಭಾಷಣ ಮಾಡಿದ್ದು ಸರಿಯಲ್ಲ, ಈ ರೀತಿಯ ವ್ಯಕ್ತಿಗಳನ್ನು ಆರಂಭದಲ್ಲಿ ಎಡಮೂರಿ ಕಟ್ಟಿ ಕಾನೂನು ರೀತಿಯ ಶಿಕ್ಷೆಯನ್ನು ವಿಧಿಸಬೇಕು.ಈತ ಒಬ್ಬ ಮತಾಂದ,
ಇಂತಹ ವ್ಯಕ್ತಿಯ ಬಗ್ಗೆ ಪೊಲೀಸರು ಸ್ವಯಂ ಪುಕಾರು ಹಾಕಿ ಇಂತವರ ಮೇಲೆ ಉಗ್ರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಾಸ್ಕರ, ಸ್ನೇಕ್ ಸತೀಶ್, ಗಣೇಶ, ಸುಮೇಶ್,ಜನು,ಚಂದ್ರು,ಸಜೀವನ್,ಮೋಹನ್, ಉಣ್ಣಿ ,ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.