Kodagu

ಮಡಿಕೇರಿಯಲ್ಲಿ ಅ.15 ರಂದು ಮತದಾರರ ಹಕ್ಕು ಉಳಿವಿಗೆ ಪ್ರತಿಭಟನಾ ಮೆರವಣಿಗೆ

admincoorgdaily

ಮಡಿಕೇರಿಯಲ್ಲಿ ಅ.15 ರಂದು ಮತದಾರರ ಹಕ್ಕು ಉಳಿವಿಗೆ ಪ್ರತಿಭಟನಾ ಮೆರವಣಿಗೆ
ಮಡಿಕೇರಿ: ದೆಹಲಿಯಲ್ಲಿ ನಡೆಯುತ್ತಿರುವ ಜನಪರ ಹೋರಾಟಕ್ಕೆ ಬೆಂಬಲ ಸೂಚಿಸಿ, ಮತದಾರರ ಹಕ್ಕು ಉಳಿವಿಗಾಗಿ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯಿಂದ ಅ.೧೫ರಂದು ಮಡಿಕೇರಿಯಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಸಂಚಾಲಕರಾದ ನಿರ್ವಾಣಪ್ಪ ತಿಳಿಸಿದ್ದಾರೆ.

ಇಂದು ನೈಜ್ಯ ಮತದಾರರ ಹಕ್ಕನ್ನು ಎಸ್‌ಐಆರ್ ಕಸಿದುಕೊಳ್ಳುತ್ತಿದೆ. ಬಿಜೆಪಿಯನ್ನು ಶಾಶ್ವತವಾಗಿ ಅಧಿಕಾರಕ್ಕೆ ಉಳಿಸುವ ಸಲುವಾಗಿ ಚುನಾವಣಾ ಆಯೋಜ ಇಂದು ಕೆಲಸ ಮಾಡುತ್ತಿದೆ. ಇತ್ತ ಪೊಲೀಸರು ಪ್ರತಿಭಟನಾ ನಿರತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಮತದಾರರ ಹಕ್ಕನ್ನು ಉಳಿವಿಗಾಗಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಅಂದು ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಎಸ್‌ಐಆರ್ ರದ್ದು, ಫಾರಂ-೭ ವಿಳಂಬದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ವೇದಿಕೆಯ ಸದಸ್ಯರು, ಚುನಾವಣಾ ಆಯೋಗ ಬಿಜೆಪಿ ಪರ ವರ್ತಿಸುತ್ತಿದೆ. ಪ್ರಧಾನಿ, ಗೃಹ ಸಚಿವರು ಮತ್ತು ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಗೌರವಾಧ್ಯಕ್ಷ ಮೊಹಮ್ಮದ್ ಹನೀಫ್, ಸದಸರಾದ ಅಮಿನ್ ಮೋಯಿಸಿನ್, ದಿವಾಕರ್.ಎಚ್.ಎಲ್, ಪ್ರೇಮ್ ಕುಮಾರ್, ಹಮೀದ್ ಮೌಲಾವಿ ಇದ್ದರು.