Kodagu

ವಶಪಡಿಸಿಕೊಂಡ ಅಕ್ಕಿ ಬಹಿರಂಗ ಹರಾಜು

admincoorgdaily

ಸಾಂದರ್ಭಿಕ ಚಿತ್ರ
ಮಡಿಕೇರಿ:-ತಾಲೂಕಿಗೆ ಸಂಬಂಧಿಸಿದಂತೆ ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿ ವಶಪಡಿಸಿಕೊಂಡ 17.50 ಕ್ವಿಂಟಾಲ್ ಅಕ್ಕಿಯನ್ನು ಜಿಲ್ಲಾಧಿಕಾರಿ ಅವರ ನ್ಯಾಯಾಲಯದಲ್ಲಿ ಅಗತ್ಯ ವಸ್ತುಗಳ ಕಾಯಿದೆಯಡಿ ವಶಪಡಿಸಿಕೊಂಡ ಅಕ್ಕಿಯನ್ನು ಬಹಿರಂಗ ಹರಾಜು ಮಾಡುವಂತೆ ನವೆಂಬರ್ 06 ರಂದು ಆದೇಶ ಮಾಡಿರುತ್ತಾರೆ. 

ಅದರಂತೆ ಪ್ರಕರಣದಲ್ಲಿ ವಶಪಡಿಸಿಕೊಂಡ 17.50 ಕ್ವಿಂಟಾಲ್ ಅಕ್ಕಿಯನ್ನು  ನವೆಂಬರ್, 12 ರಂದು ಮಧ್ಯಾಹ್ನ 12 ಗಂಟೆಗೆ ಎಪಿಸಿಎಂಎಸ್ ಇವರ ಗೋದಾಮಿನ ಆವರಣದಲ್ಲಿ ತಹಶೀಲ್ದಾರರು ಮಡಿಕೇರಿ ಇವರ ಸಮಕ್ಷಮದಲ್ಲಿ ವಶಪಡಿಸಿಕೊಂಡ ಅಕ್ಕಿಯನ್ನು ಬಹಿರಂಗ ಹರಾಜು ಮಾಡಲಾಗುವುದು.  
ಹೆಚ್ಚಿನ ಮಾಹಿತಿಗೆ ತಹಶೀಲ್ದಾರ್ರವರ ಕಚೇರಿ, ಮಡಿಕೇರಿ ತಾಲೂಕು, ಮಡಿಕೇರಿ-571201, ದೂರವಾಣಿ ಸಂಖ್ಯೆ / ಫ್ಯಾಕ್ಸ್ : 08272-228396 ಇಮೇಲ್: thasildarmdkeln@gmail.com ನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ತಾಲ್ಲೂಕು ತಹಶೀಲ್ದಾರ್ ಅವರು ತಿಳಿಸಿದ್ದಾರೆ.