Kodagu

ಪುತ್ತರಿ ಹಬ್ಬಕ್ಕೆ ನ. 26 ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ

admincoorgdaily

ಪುತ್ತರಿ ಹಬ್ಬಕ್ಕೆ ನ. 26 ರಂದು  ಕೊಡಗು ಜಿಲ್ಲೆಯಲ್ಲಿ  ಸಾರ್ವತ್ರಿಕ ರಜೆ
ಮಡಿಕೇರಿ;ಕರ್ನಾಟಕ ಸರ್ಕಾರವು 2025ರ ನವಂಬರ್ ತಿಂಗಳಲ್ಲಿ ಪ್ರಕಟಿಸಿರುವ 2026ನೇ ಸಾಲಿನ ಸಾರ್ವತ್ರಿಕ ರಜೆಗಳ ಪಟ್ಟಿಯಲ್ಲಿ ನ. 26 ರಂದು ಗುರುವಾರ ಕೊಡಗಿನ ಸಾಂಪ್ರದಾಯಿಕ ಹಬ್ಬ ಪುತ್ತರಿ ಹಬ್ಬಕ್ಕೆ  ಕೊಡಗು ಜಿಲ್ಲೆಗೆ ಮಾತ್ರ ಸೀಮಿತವಾಗಿ ಸ್ಥಳೀಯ ಸಾರ್ವಜನಿಕ ರಜೆಯನ್ನು ಘೋಷಣೆ ಮಾಡಿದೆ. 

ನ. 25 ರಂದು ರಾತ್ರಿ ರೋಹಿಣಿ ನಕ್ಷತ್ರದಲ್ಲಿ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ಕದಿರು ತೆಗೆದ ಬಳಿಕ ಪುತ್ತರಿ ಹಬ್ಬಕ್ಕೆ ಚಾಲನೆ ಸಿಗಲಿದೆ. ಮರುದಿನವೂ ಕೊಡಗಿನ ಜನತೆ ಪುತ್ತರಿ ಹಬ್ಬಾಚರಣೆಯಲ್ಲಿ ತೊಡಗುವುದರಿಂದ ನ. 25 ರ ಬದಲಿಗೆ ನ. 26 ರಂದು ಕೊಡಗು ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಿದೆ ಎನ್ನಲಾಗಿದೆ.  ಈ ಹಿನ್ನೆಲೆ ನ. 26 ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ ಇರಲಿದೆ.