Kodagu

ಸೆ.12 ರಂದು ಕೊಡ್ಲಿಪೇಟೆಯಲ್ಲಿ ಪ್ರಜಾಸೇವಾ ಆಂದೋಲನಾ ಸಭೆ

admincoorgdaily

ಸೆ.12 ರಂದು ಕೊಡ್ಲಿಪೇಟೆಯಲ್ಲಿ ಪ್ರಜಾಸೇವಾ ಆಂದೋಲನಾ ಸಭೆ
ಮಡಿಕೇರಿ(ಕೂರ್ಗ್ ಡೈಲಿ); 
ಸೋಮವಾರಪೇಟೆ ತಾಲ್ಲೂಕು ಮಟ್ಟದ ಪ್ರಜಾಸೇವಾ ಆಂದೋಲನಾ ಸಭೆಯು  ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್, 12 ರಂದು ಬೆಳಗ್ಗೆ 10.30 ಗಂಟೆಗೆ ಸೋಮವಾರಪೇಟೆ ತಾಲ್ಲೂಕು ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಶ್ರೀಮತಿ ಭದ್ರಮ್ಮ ಮಹಂತಪ್ಪ ಕಲ್ಯಾಣ ಮಂಟಪ್ಪದಲ್ಲಿ ನಡೆಯಲಿದೆ. 

ಸೋಮವಾರಪೇಟೆ ತಾಲ್ಲೂಕಿನ ಸಾರ್ವಜನಿಕರು ಪ್ರಜಾಸೇವಾ ಆಂದೋಲನದಲ್ಲಿ ಪಾಲ್ಗೊಂಡು ತಮ್ಮ ಕುಂದುಕೊರತೆ ಸಂಬಂಧ ಮನವಿ ಸಲ್ಲಿಸಿ ಪರಿಹಾರ ಪಡೆಯಬಹುದಾಗಿದೆ ಎಂದು ಸೋಮವಾರಪೇಟೆ ತಾಲ್ಲೂಕು ತಹಶೀಲ್ದಾರ್‍ರಾದ ಕೆ.ಕೆ.ಕೃಷ್ಣಮೂರ್ತಿ ಅವರು ಕೋರಿದ್ದಾರೆ.