Kodagu

ಸುಂದರನಗರದಲ್ಲಿ ಮಳೆಗೆ 04 ಮನೆಗಳ ಮೇಲ್ಛಾವಣಿ ಹಾನಿ: ರಸ್ತೆಗೆ ಅಡ್ಡಲಾಗಿ ಬಿದ್ದ ಮರ

admincoorgdaily

ಸುಂದರನಗರದಲ್ಲಿ ಮಳೆಗೆ 04 ಮನೆಗಳ ಮೇಲ್ಛಾವಣಿ ಹಾನಿ: ರಸ್ತೆಗೆ ಅಡ್ಡಲಾಗಿ ಬಿದ್ದ ಮರ
1002542199.jpg


ಕುಶಾಲನಗರ;
 ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸುಂದರನಗರದಲ್ಲಿ ಭಾರೀ ಮಳೆಗೆ ೩ ಮನೆಗಳ‌ ಮೇಲ್ಚಾವಣಿ ಹಾನಿಯಾದ ಘಟನೆ ನಡೆದಿದ್ದು, ಸ್ಥಳಕ್ಕೆ ಕೂಡುಮಂಗಳೂರು ಗ್ರಾ.ಪಂ ಮಾಜಿ ಸದಸ್ಯ ಕೆ.ಬಿ.ಶಂಶುದ್ಧೀನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಸುಂದರನಗರದ ಆನಂದ್ ತುಳಸಿ, ಶಿವ ರಾದ, ಯೋಗೇಶ್ ಯೋಗಾವತಿ, ಮಂಗಳಮ್ಮರವರ ಮನೆಯ ಮೇಲ್ಛಾವಣಿ ಹಾನಿಯಾಗಿದೆ‌. ಅದೃಷ್ಟವಶಾತ್ ಯಾರಿಗೂ ಯಾವುದೇ ಅನಾಹುತ ಸಂಭವಿಸಲಿಲ್ಲ. ಘಟನಾ ಸ್ಥಳಕ್ಕೆ ಗ್ರಾ.ಪಂ ಮಾಜಿ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದು, ಕೂಡಲೇ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದಾರೆ. 

ಈ ಸಂದರ್ಭಾ ಮಾತನಾಡಿದ ಮಾಜಿ ಸದಸ್ಯರಾದ ಕೆ.ಬಿ.ಶಂಶುದ್ಧೀನ್, ಭಾರೀ ಮಳೆಗೆ ಎಲ್ಲೆಡೆ ಅವಾಂತರ ಸೃಷ್ಟಿಯಾಗಿದೆ. ಸುಂದರನಗರದಲ್ಲಿ ನಾಲ್ಕು ಮನೆಗಳ ಮೇಲ್ಚಾವಣಿಗಳು ಹಾನಿಯಾಗಿದೆ‌. ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದೆ. ಇದನ್ನು ಕೂಡಲೇ ತೆರವುಗೊಳಿಸುವ ಕೆಲಸ ಆಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಕೂಡಲೇ ಸರ್ಕಾರ ತ್ವರಿತಗತಿಯಲ್ಲಿ ಪರಿಹಾರ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು. 
ಈ ಸಂದರ್ಭ ಸ್ಥಳೀಯರಾದ ಆನಂದ್, ಅಭಿಷೇಕ್ ಹಾಗೂ ಗ್ರಾಮಸ್ಥರು ಇದ್ದರು.