ಕೊಡಗಿನಲ್ಲಿ ಬೆಳೆ ರಕ್ಷಣೆಗೆ ಮಳೆಯ ಅಗತ್ಯತೆ ಇದೆ: ಸರ್ಕಾರ ಕ್ರಮ ಕೈಗೊಳ್ಳಲು ಪ್ರಗತಿಪರ ರೈತ ಪುಲಿಯಂಡ ಜಗದೀಶ್ ಒತ್ತಾಯ
admincoorgdaily

ಮಡಿಕೇರಿ;ನಾಟಿ ಮಾಡಿದ ಭತ್ತದ ಗದ್ದೆಗಳು ನೀರಿಲ್ಲದೆ ಒಣಗುತ್ತಿದ್ದು ರೈತರ ರಕ್ಷಣೆಗೆ ಸರ್ಕಾರ ಚಿಂತನೆ ನಡೆಸುವಂತೆ ವಿರಾಜಪೇಟೆ ತಾಲ್ಲೂಕಿನ ಮಗ್ಗುಲ ಗ್ರಾಮದ ಪ್ರಗತಿಪರ ಕೃಷಿಕ ಪುಲಿಯಂಡ ಜಗದೀಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬಾರಿ ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆಯ ಕೊರತೆಯಿಂದ ಜಲ ಉತ್ಪತಿಯಾಗದೆ ಕೆರೆ,ಕಟ್ಟೆ ತೋಡಗಳು ಬತ್ತಿ ಹೋಗಿದ್ದು ಭತ್ತದ ಗದ್ದೆಗಳು ಒಣಗುತ್ತಿದೆ.
ತಕ್ಷಣವೇ ವೈಜ್ಞಾನಿಕವಾಗಿ
ಮಳೆ ಬರಿಸುವ ನಿಟ್ಟಿನಲ್ಲಿ ಮೋಡ ಬಿತ್ತನೆ ಮೂಲಕ ಮಳೆ ಬರಿಸಿ ಭತ್ತದ ಕೃಷಿಕರಿಗೆ ನೆರವಾಗಬೇಕು ಎಂದು ಸುಮಾರು 12 ಏಕರೆ(400 ಭಟ್ಟಿ ಭೂಮಿ) ಪ್ರದೇಶದಲ್ಲಿ ಭತ್ತದ ಕೃಷಿ ಮಾಡಿರುವ ಜಗದೀಶ್ ಮನವಿ ಮಾಡಿದ್ದಾರೆ.
ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನ
ಮುಂದುವರಿದಿರುವ ದಿನಗಳಲ್ಲಿ
ಅಗತ್ಯತೆ ಮತ್ತು ಅನಿವಾರ್ಯತೆ ಇದ್ದರೆ ವೈಜ್ಞಾನಿಕವಾಗಿ ಪರಿಹಾರ ಕಂಡು ಕೊಳ್ಳುವುದು ಸಮಂಜಸವಾಗಿದೆ ಎಂದು ಜಗದೀಶ್ ಪತ್ರಿಕಾ ಹೇಳಿಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.