Kodagu

ಕೊಡಗಿನೊಂದಿಗೆ ಬೆಸೆದುಕೊಂಡ ರಾಮಾಪುರಂ ಕುಟುಂಬದ ಶತಮಾನದ ಪಯಣ; ಶಿಕ್ಷಣ, ಆರೋಗ್ಯ, ಪರಿಸರ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಕುಟುಂಬದ ಮಹತ್ವದ ಕೊಡುಗೆ

admincoorgdaily

ಕೊಡಗಿನೊಂದಿಗೆ ಬೆಸೆದುಕೊಂಡ ರಾಮಾಪುರಂ ಕುಟುಂಬದ ಶತಮಾನದ ಪಯಣ;  ಶಿಕ್ಷಣ, ಆರೋಗ್ಯ, ಪರಿಸರ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಕುಟುಂಬದ ಮಹತ್ವದ ಕೊಡುಗೆ
ಸಿದ್ದಾಪುರ :-
ಕೊಡಗಿನ ನೆಲ, ಜನಜೀವನ, ಸಂಸ್ಕೃತಿ ಹಾಗೂ ಪ್ರಕೃತಿಯೊಂದಿಗೆ ರಾಮಾಪುರಂ ಕುಟುಂಬ ಹೊಂದಿರುವ ಶತಮಾನದ ಅವಿನಾಭಾವ ಸಂಬಂಧವನ್ನು ಸ್ಮರಿಸುವ ಕಾರ್ಯಕ್ರಮ ಸೋಮವಾರ ನಡೆಯಿತು.

ರಾಮಾಪುರಂ ಕುಟುಂಬದ ಹಿರಿಯ ಸದಸ್ಯ ಇಮಾನ್ಯುಯಲ್ ಟಿ. ರಾಮಾಪುರಂ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ
ಸುಮಾರು 100 ವರ್ಷಗಳ ಹಿಂದೆ ಕುಟುಂಬದ ಹಿರಿಯರೊಬ್ಬರು ಕೈಗೊಂಡ ಸಾಹಸಮಯ ಪ್ರಯಾಣದಿಂದ ಕೊಡಗಿನೊಂದಿಗಿನ ನಂಟು ಆರಂಭಗೊಂಡಿದ್ದು, ಬಳಿಕ ಹಲವು ತಲೆಮಾರುಗಳ ಮೂಲಕ ಈ ಬಾಂಧವ್ಯ ಮುಂದುವರಿದಿದೆ ಕೊಡಗಿನಲ್ಲಿ ಕುಟುಂಬ, ಬಾಂಧವ್ಯ ಮತ್ತು ಪರಂಪರೆಯ 100 ವರ್ಷಗಳು ಎಂಬ ಆಶಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಯರು ಹಾಗೂ ಸದಸ್ಯರು ಪಾಲ್ಗೊಂಡು, ಕೊಡಗಿನಲ್ಲಿ ಕಳೆದ ವರ್ಷಗಳ ಅನುಭವ ಮತ್ತು ನೆನಪುಗಳನ್ನು ಹಂಚಿಕೊಂಡರು

ಕೊಡಗು ತಮ್ಮ ಕುಟುಂಬದ ಬದುಕು ಹಾಗೂ ಇತಿಹಾಸದ ಅವಿಭಾಜ್ಯ ಭಾಗವಾಗಿದೆ ಮುಂದಿನ ತಲೆಮಾರುಗಳಲ್ಲಿಯೂ ಈ ಬಾಂಧವ್ಯವನ್ನು ಮುಂದುವರಿಸುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕುಟುಂಬದ ಸದಸ್ಯ ಚೆರಿಯನ್ ರಾಮಾಪುರಂ ಮಾತನಾಡಿ ರಾಮಾಪುರಂ ಕುಟುಂಬವು ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ವನ್ಯಜೀವಿ ರಕ್ಷಣೆ, ಮಕ್ಕಳ ಕಲ್ಯಾಣ ಹಾಗೂ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಹಲವು ರೀತಿಯ ನೆರವು ನೀಡುತ್ತಾ ಬಂದಿದೆ
ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೊಡಗಿನ ‘ಮಾರ್ನಿಂಗ್ ಗ್ಲೋರಿ’ ಪೂರ್ವಪ್ರಾಥಮಿಕ ಶಾಲೆ, ಕಬಿನಿ ಹಾಗೂ ಹಂಪಿಯಲ್ಲಿನ ವಸತಿ ಶಾಲಾ ಕಾರ್ಯಕ್ರಮಗಳಿಗೆ ನೆರವು ನೀಡಲಾಗುತ್ತಿದೆ. ಸಿಬ್ಬಂದಿಯ ಮಕ್ಕಳ ಶಿಕ್ಷಣಕ್ಕೆ ಧನಸಹಾಯ, ವೃತ್ತಿಪರ ತರಬೇತಿ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಕಾರ್ಯವೂ ನಡೆಯುತ್ತಿದೆ ಹಾಗೂ
ಬಡವರು ಹಾಗೂ ನಿರ್ಗತಿಕರಿಗೆ ಉಚಿತ ರಕ್ತಶೋಧನಾ ಚಿಕಿತ್ಸಾ ಸೇವೆ, ಆಂಬ್ಯುಲೆನ್ಸ್ ಸೌಲಭ್ಯ, ಆಸ್ಪತ್ರೆಗಳ ವಿವಿಧ ಯೋಜನೆಗಳಿಗೆ ನೆರವು ಹಾಗೂ ಅಗತ್ಯವಿರುವವರಿಗೆ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ಸಹಾಯ ಒದಗಿಸಲಾಗಿದೆ
ಕಬಿನಿ ಅರಣ್ಯ ಪ್ರದೇಶದಲ್ಲಿ ವನ್ಯಜೀವಿ ಸಂರಕ್ಷಣೆಗೆ ವಾಹನ ಒದಗಿಸುವುದು, ಬೇಸಿಗೆಯಲ್ಲಿ ಕಾಡುಪ್ರಾಣಿಗಳಿಗೆ ನೀರು ಒದಗಿಸುವ ವ್ಯವಸ್ಥೆ, ಸಿದ್ಧಾಪುರ ಗ್ರಾಮ ಪಂಚಾಯಿತಿಗೆ ತ್ಯಾಜ್ಯ ವಿಲೇವಾರಿಗೆ ಭೂಮಿ ನೀಡುವುದು ಹಾಗೂ ರಸ್ತೆ ದುರಸ್ತಿ ಕಾರ್ಯಗಳಿಗೆ ನೆರವು ನೀಡಲಾಗಿದೆ. ಮಕ್ಕಳಲ್ಲಿ ವನ್ಯಜೀವಿ ಸಂರಕ್ಷಣೆ ಕುರಿತು ಅರಿವು ಮೂಡಿಸಲು ಬೇಸಿಗೆ ಶಿಬಿರಗಳನ್ನೂ ಆಯೋಜಿಸಲಾಗಿದೆ ಎಂದರು.


ಅನಾಥ ಹಾಗೂ ಬಡ ಮಕ್ಕಳ ಕಲ್ಯಾಣ, ಆಶ್ರಮಗಳಿಗೆ ನೆರವು, ಶಾಲಾ ಕೊಠಡಿಗಳ ನಿರ್ಮಾಣ, ಪುಸ್ತಕಗಳು ಹಾಗೂ ಅಗತ್ಯ ಸುರಕ್ಷತಾ ಸಾಮಗ್ರಿಗಳ ವಿತರಣೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಕುಟುಂಬ ಕೈಗೊಂಡಿದೆ ಮತ್ತು
ಸಿದ್ಧಾಪುರ ಹಾಗೂ ಮಾಲ್ದಾರೆ ವ್ಯಾಪ್ತಿಯಲ್ಲಿ ಎತ್ತರದ ವಿದ್ಯುತ್ ದೀಪಗಳು ಮತ್ತು ಸೌರ ಬೀದಿ ದೀಪಗಳ ಅಳವಡಿಕೆ, ಸೇತುವೆ ನಿರ್ಮಾಣ, ಸಿದ್ಧಾಪುರ ಪೊಲೀಸ್ ಠಾಣೆಗೆ ಗಣಕಯಂತ್ರ ಹಾಗೂ ವೀರಾಜಪೇಟೆ ತಹಸೀಲ್ದಾರ್ ಕಚೇರಿಗೆ ಶುದ್ಧೀಕರಿಸಿದ ಕುಡಿಯುವ ನೀರಿನ ಘಟಕ ಒದಗಿಸಲಾಗಿದೆ ಕಬಿನಿ ಸರ್ಕಾರಿ ಶಾಲಾ ಮಕ್ಕಳಿಗೆ ‘ಕಲಿಕಾ ಹಬ್ಬ’ದ ಸಂದರ್ಭದಲ್ಲಿ ಉಚಿತ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದರು

ಪತ್ರಿಕಾಗೋಷ್ಠಿಯಲ್ಲಿ ಕುಟುಂಬದ ಪ್ರಮುಖರಾದ ಸುಶೀಲಾ ಟಿ. ರಾಮಾಪುರಂ, ಡಾ. ಜಾನ್ ರಾಮಾಪುರಂ, ರೊಶಿನಿ ರಾಮಾಪುರಂ ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.