ಪೊನ್ನಂಪೇಟೆಯಲ್ಲಿ ರಮೇಶ್ ಉತ್ತಪ್ಪ ಅವರ ಪುಸ್ತಕ ಬಿಡುಗಡೆ - ಶಾಸಕ ಎ.ಎಸ್ ಪೊನ್ನಣ್ಣ ಭಾಗಿ
admincoorgdaily

ಪೊನ್ನಂಪೇಟೆ: ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ (ರಿ) ಆಶ್ರಯದಲ್ಲಿ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ಐತಿಚಂಡ ರಮೇಶ್ ಉತ್ತಪ್ಪ ಅವರು ರಚಿಸಿದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಭಾಗವಹಿಸಿದರು.
ಬಳಿಕ ಮಾತನಾಡಿದ ಅವರು, ಕೊಡವ ಜನಾಂಗದವರು ನೈಜ ಆಚರಣೆಗಳನ್ನು ಬಿಡಬಾರದು. ಪುಸ್ತಕವನ್ನು ಓದದೇ ಏನನ್ನು ವಿಶ್ಲೇಷಣೆ ಮಾಡಲು ಸಾಧ್ಯವಿಲ್ಲ. ಒಂದು ಅಧ್ಯಯನ ಪುಸ್ತಕವನ್ನು ಹೊರತರುವುದು ತುಂಬಾ ಕಷ್ಟದ ಕೆಲಸ. ಗುರು ಕಾರೋಣದಲ್ಲಿ ನಾವು ಕೇಳಿಕೊಂಡರೆ ಅವರೇ ಎಲ್ಲವನ್ನು ತಿಳಿಸುವ ಸಂಪರ್ಕ ಪೂರ್ವ ಕಾಲದಿಂದಲೇ ಕೊಡವ ಜನಾಂಗ ಹೊಂದಿದೆ. ಯಾರೂ ಪುಸ್ತಕವನ್ನು ಸಂಪಾದನೆಗಾಗಿ ಬರೆಯುವುದಿಲ್ಲ. ಸಾಹಿತಿ ಐಚಂಡ ರಮೇಶ್ ಉತ್ತಪ್ಪ ಅವರು ಬರೆದ ಪುಸ್ತಕ ಎಲ್ಲರೂ ಓದುವಂತಾಗಲಿ. ನನ್ನ ತಾತ 1963ರಲ್ಲಿ ಕೋವಿ ಹಕ್ಕಿನ ಬಗ್ಗೆ ಕಾನೂನು ಹೋರಾಟ ಮಾಡಿದ್ದರು. ಪುಸ್ತಕ ತುಂಬಾ ಚೆನ್ನಾಗಿ ಮೂಡಿಬಂದಿದೆ. ಲೇಖಕ ರಮೇಶ್ ಉತ್ತಪ್ಪ ಅವರಿಗೆ ಯಶಸ್ಸು ದೊರೆಯಲಿ. ಪ್ರಕಟಣೆ ಮಾಡಿ ಹೊರತಂದ ಜಬ್ಬೂಮಿ ಸಂಘಟನೆ ಉತ್ತಮ ಕೆಲಸ ಮಾಡಿದೆ. 500 ಪುಸ್ತಕಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ, ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಮೋಟಯ್ಯ, ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜೀವ್ ಬೋಪಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಫೆಡರೇಶನ್ ಆಫ್ ಕೊಡವ ಸಮಾಜ ಅಧ್ಯಕ್ಷ ಕಳಿಚಂಡ ವಿಷ್ಣು ನಾಚಪ್ಪ, ಲೇಖಕ ಐಚಂಡ ರಮೇಶ್ ಉತ್ತಪ್ಪ, ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಸದಸ್ಯರು, ಪದಾಧಿಕಾರಿಗಳು ಹಾಗೂ ಕೊಡವ ಸಮಾಜದ ಸದಸ್ಯರು ಉಪಸ್ಥಿತರಿದ್ದರು.