Kodagu

ನವೀಕೃತ ಕೋಲ್‌ಮಂದ್ ಲೋಕಾರ್ಪಣೆ ನ.21ಕ್ಕೆ

admincoorgdaily

ನವೀಕೃತ ಕೋಲ್‌ಮಂದ್ ಲೋಕಾರ್ಪಣೆ ನ.21ಕ್ಕೆ
ಮಡಿಕೇರಿ: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿರುವ ಕೊಡವ ಸಮಾಜದ ನವೀಕೃತ ಕೋಲ್‌ಮಂದ್ ಉದ್ಘಾಟನೆ ನ.೨೧ರಂದು ಸಂಜೆ ೪ ಗಂಟೆಗೆ ನಡೆಯಲಿದೆ ಎಂದು ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ತಿಳಿಸಿದ್ದಾರೆ.
ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಮುತ್ತಪ್ಪ ವಹಿಸಲಿದ್ದಾರೆ.

 ಕಾರ್ಯಕ್ರಮದಲ್ಲಿ ಶಾಸಕ ಡಾ.ಮಂತರ್ ಗೌಡ, ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ಸಂಸದ ಯದುವೀರ್ ಒಡೆಯರ್, ಎಂಎಲ್‌ಸಿ ಸುಜಾ ಕುಶಾಲಪ್ಪ, ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಇದೇ ದಿನ ಸಂಜೆ ೬.೩೦ಕ್ಕೆ ಪುತ್ತರಿ ಕೋಲಾಟದ ಈಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಡಿಕೇರಿ ಕೊಡವ ಸಮಾಜದ ಕೆ.ದೇವಯ್ಯ, ಬಿ.ಸರಳ ಕರುಂಬಯ್ಯ, ಎನ್.ದಿನೇಶ್, ಎಸ್.ವಿಶಾಲ್ ಕಾರ್ಯಪ್ಪ, ಕಾಳಚಂಡ ಅಪ್ಪಣ್ಣ ಇದ್ದರು.