Kodagu

ಮಾಧ್ಯಮ ಸ್ಪಂದನಕ್ಕೆ ಸ್ಪಂದನೆ: ಸಂಕಷ್ಟದ ಕುಟುಂಬಕ್ಕೆ 3 ವರ್ಷ ಫುಡ್ ಕಿಟ್ ನೀಡಲು ಮುಂದಾದ ನಗರಸಭಾ ಸದಸ್ಯ ಮುಸ್ತಫಾ

admincoorgdaily

ಮಾಧ್ಯಮ ಸ್ಪಂದನಕ್ಕೆ ಸ್ಪಂದನೆ: ಸಂಕಷ್ಟದ ಕುಟುಂಬಕ್ಕೆ 3 ವರ್ಷ ಫುಡ್ ಕಿಟ್ ನೀಡಲು ಮುಂದಾದ ನಗರಸಭಾ ಸದಸ್ಯ ಮುಸ್ತಫಾ
ಮಡಿಕೇರಿ:
ಮಡಿಕೇರಿ ಹೊರವಲಯದಲ್ಲಿ ನೆಲೆಸಿರುವ ನಾಲ್ವರು ಸದಸ್ಯರಿರುವ ಕುಟುಂಬವೊಂದರ ಮನೆಯ ಯಜಮಾನ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬ ಸಂಕಷ್ಟದಲ್ಲಿರುವ ವಿಷಯ ಮಾಧ್ಯಮ ಸ್ಪಂದನ ತಂಡದ ಗಮನಕ್ಕೆ ಬಂದಿತ್ತು.

ಈ ಕುರಿತು ಮಾಧ್ಯಮ ಸ್ಪಂದನ ತಂಡ ಮಡಿಕೇರಿ ನಗರಸಭಾ ಸದಸ್ಯ ಎಂ.ಎ. ಮುಸ್ತಫಾ ಅವರ ಗಮನಕ್ಕೆ ತಂದ ಕೂಡಲೇ ಅವರು ತಕ್ಷಣ ಸ್ಪಂದಿಸಿದ್ದಾರೆ.

ಸಂಕಷ್ಟದಲ್ಲಿರುವ ಕುಟುಂಬಕ್ಕೆ ಮುಂದಿನ ಮೂರು ವರ್ಷಗಳ ಕಾಲ ಪ್ರತಿ ತಿಂಗಳು ಅಗತ್ಯ ಆಹಾರ ಸಾಮಗ್ರಿ ಇರುವ ಫುಡ್ ಕಿಟ್ ನೀಡಲು ಮುಸ್ತಫಾ ಅವರು ಒಪ್ಪಿಕೊಂಡಿದ್ದಾರೆ. ಈಗಾಗಲೇ ಮೊದಲ ಕಿಟ್ ಅನ್ನು ಕುಟುಂಬಕ್ಕೆ ತಲುಪಿಸಿದ್ದಾರೆ.
ಮುಸ್ತಫಾ ಅವರ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.