Kodagu

ಸುಂಟಿಕೊಪ್ಪ ಪ್ರೌಢಶಾಲೆಯ ನಿವೃತ್ತ ಉಪ ಪ್ರಾಂಶುಪಾಲ ಬಾಲಕೃಷ್ಣ ನಿಧನ

admincoorgdaily

ಸುಂಟಿಕೊಪ್ಪ ಪ್ರೌಢಶಾಲೆಯ ನಿವೃತ್ತ ಉಪ ಪ್ರಾಂಶುಪಾಲ ಬಾಲಕೃಷ್ಣ ನಿಧನ
ಮಡಿಕೇರಿ;
ಕೊಡಗು ಜಿಲ್ಲೆಯ ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ, ಜೂನ್ 2026 ರಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಬಾಲಕೃಷ್ಣ ಈ ದಿನ ಸೋಮವಾರ( ಅ.26 ರಂದು) ಹುಣಸೂರಿನಲ್ಲಿ ನಿಧನ ಹೊಂದಿದ್ದಾರೆ. ಇವರು ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.ಮೃತದೇಹವು ಈಗ ಹುಣಸೂರು ನಗರದ ದರ್ಗಾ ರಸ್ತೆಯ
 ವಿ.ಬಿ.ಬೋರೆ  ಬಳಿ ಇವರ  ಇವರ ಸ್ವಗೃಹದಲ್ಲಿದ್ದು, ಮಧ್ಯಾಹ್ನ 1.30 ಗಂಟೆಯ ನಂತರ ಇವರ ಸ್ವಗ್ರಾಮವಾದ ಕೆ.ಆರ್.ನಗರ ತಾಲ್ಲೂಕಿನ ಗೊರಗುಂಡಿಗೆ ಮೃತದೇಹವನ್ನು ಕೊಂಡೊಯ್ದು ನಂತರ ಅಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮೃತರ ನಿಧನಕ್ಕೆ ಶಿಕ್ಷಣ ಇಲಾಖೆ ವತಿಯಿಂದ ಮತ್ತು ಶಾಲಾ ಶಿಕ್ಷಕರ ಬಳಗವು ಸಂತಾಪ ಸೂಚಿಸಿದೆ.
ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲಾ ವಿಭಾಗದಲ್ಲಿ 14 ವರ್ಷಗಳ ಕಾಲ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.