ಮಡಿಕೇರಿಯಲ್ಲಿ ಅಕ್ಕಿ ಲಾರಿ ವಶಕ್ಕೆ: ಅಕ್ರಮ ಸಾಗಾಟ ಶಂಕೆ, ನಗರ ಠಾಣೆಯಲ್ಲಿ ಪ್ರಕರಣ
admincoorgdaily

ಮಡಿಕೇರಿ: ಸರ್ಕಾರ ನೀಡುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಬೇರೆಡೆ ಮಾರಾಟ ಮಾಡುತ್ತಿರುವ ಶಂಕೆಯ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಅಕ್ಕಿ ಲಾರಿಯೊಂದನ್ನು ವಶಕ್ಕೆ ಪಡೆದಿದ್ದಾರೆ.
ಮಡಿಕೇರಿಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ಕಿ ಲಾರಿಯನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.