ಕುಶಾಲನಗರ ಪುರಸಭೆಯ ವಾರ್ಡ್ ನಂ. 17 ರಲ್ಲಿ 35 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ
admincoorgdaily

ಕುಶಾಲನಗರ: ಕುಶಾಲನಗರ ಪುರಸಭೆ ವ್ಯಾಪ್ತಿಯ ವಾರ್ಡ್ ನಂಬರ್ ೧೭ ರಲ್ಲಿ ಪುರಸಭೆ ಹಾಗೂ ಶಾಸಕರ ನಿಧಿಯಲ್ಲಿ ೩೫ ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದ್ದು, ಪುರಸಭೆ ಮಾಜಿ ನಾಮ ನಿರ್ದೇಶಿತ ಸದಸ್ಯರಾದ ನವೀನ್ ಅವರು ಕಾಮಗಾರಿ ವೀಕ್ಷಣೆ ನಡೆಸಿದರು.
ವಾರ್ಡ್ ನಂಬರ್ ೧೭ ರ ಜನತಾ ಕಾಲೋನಿ, ವಿನಾಯಕ ಬಡಾವಣೆಯಲ್ಲಿ ಒಟ್ಟು ೩೫ ಲಕ್ಷ ರೂಗಳ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ಅನುದಾನ ನೀಡಿದ ಮಾನ್ಯ ಶಾಸಕರಾದ ಡಾ.ಮಂತರ್ ಗೌಡರವರಿಗೆ ಹಾಗೂ ಅನುದಾನ ಕ್ಕಾಗಿ ಮನವಿ ಮಾಡಿದ ಪುರಸಭೆ ಮಾಜಿ ನಾಮ ನಿರ್ದೇಶಿತ ಸದಸ್ಯರಾದ ನವೀನ್ ಅವರಿಗೆ ಸ್ಥಳೀಯ ನಿವಾಸಿಗಳು ಧನ್ಯವಾದಗಳನ್ನು ಸಮರ್ಪಿಸಿದ್ದಾರೆ. ಇನ್ನಷ್ಟು ಅನುದಾನ ನೀಡಿ ವಾರ್ಡ್ ನ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.
ಈ ಸಂದರ್ಭ ಮಾತನಾಡಿದ ಪುರಸಭೆ ಮಾಜಿ ನಾಮ ನಿರ್ದೇಶಿತ ನವೀನ್ ಮಾತನಾಡಿ, ವಾರ್ಡ ನಂಬರ್ ೧೭ ರ ಅಭಿವೃದ್ಧಿಗೆ ಮಾನ್ಯ ಶಾಸಕರು ಸಾಕಷ್ಟು ಅನುದಾನ ನೀಡಿದ್ದಾರೆ. ವಿನಾಯಕ ಬಡಾವಣೆ, ಜನತಾ ಕಾಲೋನಿಯಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಗಳು ನಡೆದಿವೆ. ವಾರ್ಡ್ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ. ಅವರ ಪರವಾಗಿ ಶಾಸಕರಿಗೆ ಧನ್ಯವಾದಗಳು ಎಂದರು.
ಈ ಸಂದರ್ಭ ಗ್ರಾಮಸ್ಥರು ಇದ್ದರು.