Kodagu

ಅರಪಟ್ಟುವಿನಲ್ಲಿ ₹5 ಲಕ್ಷ ವೆಚ್ಚದ ರಸ್ತೆ ಉದ್ಘಾಟನೆ

admincoorgdaily

ಅರಪಟ್ಟುವಿನಲ್ಲಿ ₹5 ಲಕ್ಷ ವೆಚ್ಚದ ರಸ್ತೆ ಉದ್ಘಾಟನೆ
ಮಡಿಕೇರಿ:, ತಾಲೂಕಿನ ಅರಪಟ್ಟು ವ್ಯಾಪ್ತಿಯ ಕುಲ್ಲಚಂಡ ಐನ್ ಮನೆಗೆ ಹೋಗುವ ₹5 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ರಸ್ತೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಅಧ್ಯಕ್ಷ ಸೌಕತ್ ಆಲಿ, ಕೆಡಿಪಿ ಸದಸ್ಯ ಬಾಚಮಂಡ ಲವ ಚಿಣ್ಣಪ್ಪ, ವಲಯ ಅಧ್ಯಕ್ಷ ಕೊಡೀರ ವಿನೋದ್ ನಾಣಯ್ಯ, ಮಾಜಿ ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಕುಲ್ಲಚಂಡ ಕುಟುಂಬದ ಜಯಸದಾ, ಗಣಪತಿ, ರಾಣಿ ಗಣಪತಿ, ಕರುಂಬಯ್ಯ, ಐತಿಚಂಡ ಕಾರ್ಯಪ್ಪ, ಪಕ್ಷದ ಮುಖಂಡರಾದ ಎಡಪಾಲ ಶಾಫಿ, ಪ್ರಕಾಶ್, ಕುಂಡಚ್ಚೀರ ಮಂಜು ದೇವಯ್ಯ, ಅಜ್ಜಿಕುಟ್ಟಿರ ಪೊನ್ನು, ಆದಿತ್ಯ ಪೆಮ್ಮಯ್ಯ, ಉದಯ್ ಮಾದಪ್ಪ ಸೇರಿದಂತೆ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.