ರೋಟರಿ ವುಡ್ಸ್ ನಿಂದ ಪರಿಸರ ಸಂರಕ್ಷಣೆ ಸಂದೇಶದ ಬೈಕ್ ಜಾಥಾ
admincoorgdaily

ಮಡಿಕೇರಿ ಸೆ.20 - ನಗರದ ರೋಟರಿ ವುಡ್ಸ್ ವತಿಯಿಂದ ಪ್ರಕೖತ್ತಿಗೆ ಧಕ್ಕೆ ತಾರದಿರಿ ಎಂಬ ಸಂದೇಶದ ಬೈಕ್ ಜಾಥಾ ಆಯೋಜಿತವಾಗಿತ್ತು.
ಮಡಿಕೇರಿಯಿಂದ ಭಾಗಮಂಡಲ - ಕರಿಕೆ- ಪೆರಾಜೆ- ಸಂಪಾಜೆ ಮಾಗ೯ವಾಗಿ 150 ಕಿ.ಮೀ. ಸಾಗಿದ ರೋಟರಿ ವುಡ್ಸ್ ಬೈಕ್ ಸವಾರರು ಸಾವ೯ಜನಿಕರಿಗೆ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು. ರೋಟರಿ ಬೈಕ್ ರ್ಯಾಲಿ - ರೋಬಿ ಹೆಸರಿನ ಜಾಥಾದಲ್ಲಿ ಅನೇಕ ಗ್ರಾಮಗಳಲ್ಲಿ ಪರಿಸರ ಮಾಲಿನ್ಯ ಮಾಡದಿರಿ ಎಂಬ ಜಾಗ್ರತಿಯನ್ನು ಮೂಡಿಸಲಾಯಿತು.
ಮಡಿಕೇರಿಯಲ್ಲಿ ಬೈಕ್ ಜಾಥಾಕ್ಕೆ ರೋಟರಿ ಜಿಲ್ಲೆ 3181 ನ ನಿದೇ೯ಶಕ ಅನಿಲ್ ಹೆಚ್.ಟಿ. ಚಾಲನೆ ನೀಡಿ ಮಾತನಾಡಿ, ರೋಟರಿ ವುಡ್ಸ್ ನ ಉತ್ಸಾಹಿ ಬೈಕ್ ಸವಾರರು, ಎರಡನೇ ವಷ೯ವೂ ಬೈಕ್ ಜಾಥಾದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕಾಯ೯ ಕೈಗೊಂಡಿದ್ದಾರೆ ಎಂದು ಶ್ಲಾಘಿಸಿದರು. ಮುಂದಿನ ದಿನಗಳಲ್ಲೂ ಇನ್ನಷ್ಟು ಸಂದೇಶಗಳೊಡನೆ ಬೈಕ್ ರ್ಯಾಲಿ ನಡೆಸುಂತಾಗಲಿ ಎಂದು ಹಾರೈಸಿದರು.
ಬೈಕ್ ಸವಾರಿಯಲ್ಲಿ ಹರೀಶ್ ಕಿಗ್ಗಾಲು, ರಂಜಿತ್ ಕಿಗ್ಗಾಲು, ಹಂಚೆಟ್ಟಿರ ಮನುಮುದ್ದಪ್ಪ, ಚೇಂದ್ರಿಮಾಡ ವಿನು ಈರಪ್ಪ, ಚಂದ್ರಶೇಖರ್ , ಕಶ್ಯಪ್, ರಾಜೇಶ್ ಚೌಧರಿ, ಚೇತನ್ , ರವಿಕುಮಾರ್, ಸೇರಿದಂತೆ 9 ಮಂದಿ ಪಾಲ್ಗೊಂಡಿದ್ದರು.