ಶ.ಗ.ನಯನತಾರಾಗೆ ರಾಷ್ಟ್ರೀಯ ಪತ್ರಿಕ್ಯೋದ್ಯಮ ರತ್ನ ಪ್ರಶಸ್ತಿ
admincoorgdaily

ಶನಿವಾರಸಂತೆ: ಚಿರಾಯು ಕನ್ನಡ ವಾಹಿನಿ, ಧಾರವಾಡದ ಪ್ರತಿಫಲ ಫೌಂಡೇಶನ್ ಹಾಗೂ ಮೈಸೂರಿನ ಅಲೆಯನ್ಸ್ ಇಂಟರ್ ನ್ಯಾಷನಲ್ ಕ್ಲಬ್ ಆಫ್ ಕರುನಾಡು ಸಹಯೋಗದಲ್ಲಿ, ಕನ್ನಡ ರಾಜ್ಯೋತ್ಸವದ ಅಂಗವಾಗಿ ರೈತ ಸಂಭ್ರಮೋತ್ಸವ ಮೈಸೂರು – 2026 ಸಾಧಕರಿಗೆ ನೀಡಲಾಗುವ ರಾಷ್ಟ್ರ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘’ರಾಷ್ಟ್ರೀಯ ಪತ್ರಿಕ್ಯೋದ್ಯಮ ರತ್ನ ‘’ ಪ್ರಶಸ್ತಿಗೆ ಕೊಡಗು ಜಿಲ್ಲೆಯ ಸಾಹಿತಿ ಹಾಗೂ ಪತ್ರಕರ್ತೆ ಶ.ಗ.ನಯನತಾರಾ ಪ್ರಕಾಶ್ಚಂದ್ರ ಭಾಜನರಾಗಿದ್ದಾರೆ.
ಪತ್ರಕರ್ತೆ ನಯನತಾರಾ ಅವರ 24 ವರ್ಷಗಳ ಪತ್ರಿಕೋದ್ಯಮ ಕ್ಷೇತ್ರದ ಸಾಧನೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ನ.29 ರಂದು ಭಾನುವಾರ ಮೈಸೂರಿನ ವಿಜಯನಗರ 1 ನೇ ಹಂತದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಭವನದಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಚಿರಾಯು ಅಸೋಸಿಯೇಷನ್ ಡಾ.ಮಂಜುನಾಥ್ ಎನ್.ಶಿವಕ್ಕನವರ ಹಾಗೂ ಧಾರವಾಡದ ಪ್ರತಿಫಲ ಪೌಂಡೇಶನ್ ಸಂಸ್ಥಾಪಕ ಅಧ್ಯಕ್ಷೆ ಪೂಜಾ ಬಡಿಗೇರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.