Kodagu

ಮೂರ್ನಾಡಿನಲ್ಲಿ ಸಾದಾತ್ ಸಂಗಮ;2026

admincoorgdaily

ಮೂರ್ನಾಡಿನಲ್ಲಿ  ಸಾದಾತ್ ಸಂಗಮ;2026
ಮೂರ್ನಾಡು: ಕೊಡಗು ಜಿಲ್ಲಾ ಸಾದಾತ್ ಒಕ್ಕೂಟದ ವತಿಯಿಂದ ಆಯೋಜಿಸಲಾದ ಮೂರನೇ ವರ್ಷದ “ಕೊಡಗು ಜಿಲ್ಲಾ ಸಾದಾತ್ ಸಂಗಮ – 2K26” ಕಾರ್ಯಕ್ರಮವು ಮೂರ್ನಾಡಿನ ಶಾದಿ ಮಹಲ್‌ನಲ್ಲಿ ಸಂಭ್ರಮದಿಂದ ನಡೆಯಿತು.

“ಪರಂಪರೆಯ ಸ್ಮರಣೆ, ಸಂಬಂಧಗಳ ಸಂಭ್ರಮ” ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಸಂಗಮದಲ್ಲಿ ಕೊಡಗು ಜಿಲ್ಲೆಯ ವಿವಿಧ ಭಾಗಗಳಿಂದ ಸಾದಾತ್ ಕುಟುಂಬಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಎಮ್ಮೆಮಾಡಿನ ಅಬ್ದುಲ್ ಅಝೀಝ್ ತಂಙಳ್ ನೆರವೇರಿಸಿದರು. ಕೊಡಗು ಜಿಲ್ಲಾ ಸಾದಾತ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಶಿಹಾಬ್ ತಂಙಳ್ ಗೋಣಿಕೊಪ್ಪ ಸ್ವಾಗತಿಸಿದರು. ಅಧ್ಯಕ್ಷ ಅಬ್ದುಲ್ ಖಾದರ್ ತಂಙಳ್ ಅಯ್ಯಂಗೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಜಮ್‌ಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದ್ ಶಿಹಾಬುದ್ದೀನ್ ಅಲ್-ಐದರೂಸಿ ಕಿಲ್ಲೂರು ತಂಙಳ್ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬದ್ರುಸಾದಾತ್ ಸಯ್ಯಿದ್ ಖಲೀಲ್ ಬುಹಾರಿ ತಂಙಳ್ ಕಡಲುಂಡಿ ಅವರು ಸಾದಾತ್ ಸಮುದಾಯದ ಪರಂಪರೆ, ಕುಟುಂಬ ಬಾಂಧವ್ಯ, ಪರಸ್ಪರ ಸಹಕಾರ ಹಾಗೂ ಸಾಮಾಜಿಕ ಜವಾಬ್ದಾರಿಗಳ ಕುರಿತು ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಸಯ್ಯಿದ್ ಇಲ್ಯಾಸ್ ತಂಙಳ್ ಎಮ್ಮೆಮಾಡು, ಹಬೀಬ್ ತಂಙಳ್ ಎಮ್ಮೆಮಾಡು, ಶಿಹಾಬ್ ತಂಙಳ್ ಹೊಸತೋಟ, ಸೈಫು ತಂಙಳ್ ಎಮ್ಮೆಮಾಡು, ಕೊಯಮ್ಮ ತಂಙಳ್ ಕೊಂಡಗೇರಿ, ಕೊಡಗು ಜಿಲ್ಲಾ ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಲತೀಫ್ ಸುಂಟಿಕೊಪ್ಪ, ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ, ಕೋಶಾಧಿಕಾರಿ ಖಾಲಿದ್ ಫೈಝಿ ಅಂಬಟ್ಟಿ, ಕೊಡಗು ಜಿಲ್ಲಾ ಸುನ್ನೀಯುವ ಜನ ಸಂಘ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ, ಕೊಡಗು ಜಿಲ್ಲಾ ಸುನ್ನಿ ಸ್ಟೂಡೆಂಟ್ ಫೆಡರೇಷನ್ ಅಧ್ಯಕ್ಷ ಕಮರುದ್ದೀನ್ ಅನ್ವಾರಿ, ಕಾರ್ಯದರ್ಶಿ ಜುನೈದ್ ನೆಲ್ಯಹುದಿಕೇರಿ, ಕೋಶಾಧಿಕಾರಿ ಬಶೀರ್ ಆಜಾದ್ ನಗರ, ಮೂರ್ನಾಡು ಮಹಲ್ ಕಮಿಟಿ ಕಾರ್ಯದರ್ಶಿ ನಾಸಿರ್ ಸೇರಿದಂತೆ ಪ್ರಮುಖ ಉಮರಾ, ಉಲಮಾ ಮತ್ತು ನಾಯಕರು ಉಪಸ್ಥಿತರಿದ್ದರು.

ಸಂಗಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಸಾದಾತ್ ಕುಟುಂಬಗಳ ಸದಸ್ಯರು ಪರಸ್ಪರ ಭೇಟಿಯಾಗಿ ತಮ್ಮ ಕುಟುಂಬ ಹಾಗೂ ಸಮುದಾಯದ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿಕೊಂಡರು. ಪರಂಪರೆಯ ಸಂರಕ್ಷಣೆ, ಮುಂದಿನ ಪೀಳಿಗೆಗೆ ಮೌಲ್ಯಗಳ ವರ್ಗಾವಣೆ ಹಾಗೂ ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹೋದರತ್ವ ಬೆಳೆಸುವ ಕುರಿತು ಒತ್ತು ನೀಡಲಾಯಿತು.

ಕಾರ್ಯಕ್ರಮದ ವಂದನಾರ್ಪಣೆಯನ್ನು ಸಯ್ಯಿದ್ ಸಮೀಜ್ ತಂಙಳ್ ನೆರವೇರಿಸಿದರು.