Kodagu

ಸಾರ್ವಜನಿಕರು ಗಣೇಶೋತ್ಸವದಲ್ಲಿ ಪಾಲಿಸಬೇಕಾದ ಸುರಕ್ಷತಾ ಕ್ರಮಗಳು

admincoorgdaily

ಸಾರ್ವಜನಿಕರು ಗಣೇಶೋತ್ಸವದಲ್ಲಿ ಪಾಲಿಸಬೇಕಾದ ಸುರಕ್ಷತಾ ಕ್ರಮಗಳು
ಮಡಿಕೇರಿ:-ಗಣಪತಿ ಪೆಂಡಾಲ್‍ಗೆ ಕಡ್ಡಾಯವಾಗಿ ತಾತ್ಕಾಲಿಕ ಮೀಟರ್‍ನ್ನು ಪಡೆಯತಕ್ಕದ್ದು. ಯಾವುದೇ ಮನೆ/ ಮಳಿಗೆ ಮೀಟರ್‍ಗಳಿಂದ ವಿದ್ಯುತ್ ತೆಗೆದುಕೊಳ್ಳುವಂತಿಲ್ಲ ಹಾಗೂ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರಿಂದ ವಿದ್ಯುತ್ ಸಂಪರ್ಕ ಪಡೆಯುವುದು. ಯಾವುದೇ ವಿದ್ಯುತ್ ಕಂಬಗಳಿಂದ ಅನಧೀಕೃತವಾಗಿ ವಿದ್ಯುತ್ ಲೈನ್ ತೆಗೆದುಕೊಳ್ಳುವಂತಿಲ್ಲ. ಇದು ಕಾನೂನು ಬಾಹಿರವಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ. 
        ಯಾವುದೇ ರೀತಿ ವಿದ್ಯುತ್ ಅವಘಡಗಳು ಸಂಭವಿಸಿದ್ದಲ್ಲಿ ತಾವುಗಳೇ ನೇರ ಹೊಣೆಗಾರರಾಗಿರುತ್ತೀರಿ. ಆದ್ದರಿಂದ, ಎಚ್ಚರಿಕೆಯಿಂದ ವಿದ್ಯುತ್ ಬಳಸುವಂತೆ ಸೂಚಿಸಲಾಗಿದೆ. 

     ಹಬ್ಬಕ್ಕೆ ತೋರಣ, ಪೆಂಡಾಲ್, ಸೀರಿಯಲ್ ಲೈಟ್‍ಗಳನ್ನು ಅಳವಡಿಸುವ ಮುನ್ನ ವಿದ್ಯುತ್ ತಂತಿಗಳ ಬಗ್ಗೆ ಗಮನವಿರಲಿ, ಸೀರಿಯಲ್ ಲೈಟ್ ತಂತಿಗಳು ಸಮರ್ಪಕವಾಗಿ ಇನ್ಸುಲೇಟ್ ಆಗಿವೆಯೇ ಎಂದು ಪರೀಕ್ಷಿಸಿಕೊಳ್ಳಿ, ಸೀರಿಯಲ್ ಲೈಟ್ ಹಾಗೂ ದೀಪಗಳನ್ನು ಹಾಕುವಾಗ ವಿದ್ಯುತ್ ಕಂಬದಿಂದ ನೇರ ಸಂಪರ್ಕ ಪಡೆಯಬಾರದು. ವಿದ್ಯುತ್ ತಂತಿ, ವಿದ್ಯುತ್ ಕಂಬ ಅಥವಾ ಪರಿವರ್ತಕ ಕೇಂದ್ರಗಳಿಗೆ ಚಪ್ಪರ, ಶಾಮಿಯಾನ ಕಟ್ಟಬಾರದು. ಗಣೇಶ ಮೂರ್ತಿಯ ಮೆರವಣಿಗೆ ವೇಳೆ ರಸ್ತೆ ಬದಿಯ ವಿದ್ಯುತ್ ಮಾರ್ಗಗಳ ಬಗ್ಗೆ ಎಚ್ಚರವಿರಬೇಕು ಹಾಗೂ ಎತ್ತರದ ಕಮಾನುಗಳನ್ನು ನಿರ್ಮಿಸದೇ, ವಿದ್ಯುತ್ ತಂತಿಗಳನ್ನು ಮೇಲಕ್ಕೆ ಎತ್ತುವ ಪ್ರಯತ್ನ ಮಾಡಬಾರದು.

        ಮೆರವಣಿಗೆ ಮಾರ್ಗವನ್ನು ಮುಂಚಿತವಾಗಿ ಚಾ.ವಿ.ಸ.ನಿ.ನಿ.(ಸೆಸ್ಕ್)ಯ ಆಯಾಯ ಉಪವಿಭಾಗದ ಅಧಿಕಾರಿಗಳ ಗಮನಕ್ಕೆ ತಂದರೆ, ಅವರು ಅಗತ್ಯ ನೆರವು ಒದಗಿಸುತ್ತಾರೆ. ವಿದ್ಯುತ್ ಪರಿಕರಗಳು ಇರುವ ಸ್ಥಳಗಳಲ್ಲಿ ‘ಅಪಾಯ ವಲಯ’ ಎಂದು ಸೂಚಿಸಬೇಕು ಎಂದು ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಅವರು ಕೋರಿದ್ದಾರೆ.