ಎಮ್ಮೆಮಾಡುವಿನಲ್ಲಿ ಸಮಸ್ತ ಶತಮಾನೋತ್ಸವ ಪ್ರಚಾರ ಸಮ್ಮೇಳನ
admincoorgdaily

ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ಕರ್ನಾಟಕ ಮುಸ್ಲಿಂ ಜಮಾಅತ್ (ಕೆಎಂಜೆ), ಸುನ್ನಿ ಯುವಜನ ಸಂಘ (ಎಸ್‌ವೈಎಸ್) ಹಾಗೂ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (ಎಸ್‌ಎಸ್‌ಎಫ್) ಎಮ್ಮೆಮಾಡು ವೆಸ್ಟ್ ಯೂನಿಟ್‌ಗಳ ಸಂಯುಕ್ತ ಆಶ್ರಯದಲ್ಲಿ ಸಮಸ್ತ ಶತಮಾನೋತ್ಸವದ ಪ್ರಚಾರ ಸಮ್ಮೇಳನ ಎಮ್ಮೆಮಾಡುವಿನಲ್ಲಿ ವಿಜೃಂಭಣೆಯಿಂದ ನಡೆಯಿತು.
ಸಮ್ಮೇಳನದ ಅಧ್ಯಕ್ಷತೆಯನ್ನು ಅಬೂಬಕ್ಕರ್ ಮುಸ್ಲಿಯಾರ್ ವಹಿಸಿದ್ದರು. ಕೇರಳ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಬದರುಸ್ಸಾದಾತ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ತಂಙಳ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಅಬ್ದುಲ್ ಸಲಾಂ ಶಾಮಿಲ್ ಇರ್ಫಾನಿ, ಅಶ್ರಫ್ ಜೌಹರಿ ಹಾಗೂ ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಸದಸ್ಯ ಅಬ್ದುಲ್ ಜಲೀಲ್ ನಿಝಾಮಿ ಅವರು ಮಾತನಾಡಿದರು.
ಬರುವ 2027ರ ಜನವರಿಯಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಾಲ್ಕು ದಿನಗಳ ಕಾಲ ಸುಮಾರು 300 ಎಕರೆ ವಿಶಾಲ ಪ್ರದೇಶದಲ್ಲಿ ಒಂಬತ್ತು ಬೃಹತ್ ಐತಿಹಾಸಿಕ ಸಮ್ಮೇಳನಗಳು ನಡೆಯಲಿವೆ.
ಈ ಐತಿಹಾಸಿಕ ಮಹಾ ಸಮ್ಮೇಳನದಲ್ಲಿ ಕೊಡಗು ಜಿಲ್ಲೆಯ ಸಮಸ್ತ ಮುಸ್ಲಿಮರು ಹಾಗೂ ಸಮಸ್ತ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಖಲೀಲ್ ತಂಙಳ್ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವಾರ್ಷಿಕ ಝಮ್ರಾ ತರಬೇತಿ ನಡೆಯಿತು. ತರಬೇತಿಗೆ ಶಹೀರ್ ಅನ್ವಾರಿ ಸಖಾಫಿ ನೇತೃತ್ವ ವಹಿಸಿದ್ದರು.
ಇದಕ್ಕೂ ಮೊದಲು ಶಬೀರ್ ಹಿಮಮಿ ಹಾಗೂ ಶಾಕಿರ್ ಅನ್ವಾರಿ ಸಖಾಫಿ ಅವರು ಸ್ವಾಗತ ಗೀತೆಯ ಮೂಲಕ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಸಯ್ಯಿದ್ ಶಿಯಾಬುದ್ದೀನ್ ಕಿಲ್ಲೂರ್ ತಂಙಳ್, ಸಯ್ಯಿದ್ ಇಲ್ಯಾಸ್ ಅಲ್ ಐದರೂಸಿ ತಂಙಳ್, ಅಬೂಬಕ್ಕರ್ ಸಖಾಫಿ, ಹಾರಿಸ್ ಸಿ.ಕೆ., ಹಸೈನಾರ್ ಹಾಜಿ ಸಿ.ಎ., ಶಾದುಲಿ ಹಾಜಿ, ಹಾರಿಸ್ ಕೆ.ಎಚ್., ಅಬ್ದುಲ್ ಖಾದರ್ ಸಿ.ಎಂ., ಅಬೂಬಕರ್ ಮುಸ್ಲಿಯಾರ್ ಸಿ.ಯು., ಮಣೂಕ್ಕಾ, ಝಕರಿಯಾ ಸಅದಿ, ರಮ್ಶೀದ್ ಹಿಮಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಬ್ದುಲ್ ಜಲೀಲ್ ನಿಝಾಮಿ ಸ್ವಾಗತಿಸಿ, ಮೂಸ ಸಖಾಫಿ ವಂದಿಸಿದರು.