ನಾಪೋಕ್ಲುವಿನಲ್ಲಿ ಅ.27ರಂದು ಸಮಸ್ತ ಸೆಂಟಿನರಿ ಪ್ರಚಾರ ಸಮ್ಮೇಳನ
admincoorgdaily

ನಾಪೋಕ್ಲು :ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಶತಮಾನೋತ್ಸವ ಆಚರಣೆಯ ಅಂಗವಾಗಿ ಸಮಸ್ತ ಸೆಂಟಿನರಿ ಪ್ರಚಾರ ಸಮ್ಮೇಳನ ಹಾಗೂ ತಾಜುಲ್ ಉಲಮಾ ಮತ್ತು ನೂರುಲ್ ಉಲಮಾ ಸಂಸ್ಮರಣಾ ಕಾರ್ಯಕ್ರಮವನ್ನು ಸುನ್ನೀ ಕೋಓರ್ಡಿನೇಷನ್ ಕೊಡಗು ಜಿಲ್ಲಾ ವತಿಯಿಂದ ಅಕ್ಟೋಬರ್ 27ರಂದು ನಾಪೋಕ್ಲುವಿನಲ್ಲಿ ಆಯೋಜಿಸಲಾಗಿದೆ.
ಅ.27ಮಂಗಳವಾರ ಸಂಜೆ 6.30 ಗಂಟೆಗೆ
ನಾಪೋಕ್ಲುವಿನ ತಾಜುಲ್ ಉಲಮಾ ನಗರದಲ್ಲಿ ಆಯೋಜಿಸಲಾದ
ಕಾರ್ಯಕ್ರಮದಲ್ಲಿ ಪ್ರಖ್ಯಾತ ವಾಗ್ಮಿ ಡಾ.ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ ಅವರು ಮುಖ್ಯ ಭಾಷಣ ನಡೆಸಲಿದ್ದಾರೆ.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಶತಮಾನೋತ್ಸವದ ಅಂಗವಾಗಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರು,ಸಂಘಟನೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸ್ವಾಗತ ಸಮಿತಿಯು ಚೇರ್ಮೆನ್ ಸಯ್ಯಿದ್ ಇಲ್ಯಾಸ್ ಅಲ್ ಐದರೂಸಿ ತಂಙಳ್ ಹಾಗೂ ಕನ್ವಿನರ್ ಮೊಹಮ್ಮದ್ ಹಾಜಿ ಕುಂಜಿಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ :ಝಕರಿಯ ನಾಪೋಕ್ಲು