Kodagu

ಶನಿವಾರಸಂತೆ: ಆಲೂರು-ಸಿದ್ದಾಪುರ PHCಗೆ ರಾಷ್ಟ್ರೀಯ ಮಲೇರಿಯಾ ತಂಡ ಭೇಟಿ

admincoorgdaily

ಶನಿವಾರಸಂತೆ: ಆಲೂರು-ಸಿದ್ದಾಪುರ PHCಗೆ ರಾಷ್ಟ್ರೀಯ ಮಲೇರಿಯಾ ತಂಡ ಭೇಟಿ
ಶನಿವಾರಸಂತೆ:ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನ್ಯಾಷನಲ್ ಮಲೇರಿಯಾ ಎಲಿಮಿನೇಷನ್ ವ್ಯಾಲಿಡೇಷನ್ ರಾಷ್ಟ್ರೀಯ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಡಾ. ಕಲ್ಪನಾ ನೇತೃತ್ವದ ತಂಡ ಪರಿಶೀಲನೆ ನಡೆಸಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್ ನಿರ್ದೇಶನದ ಮೇರೆಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶ್ರೀನಿವಾಸ್ ಬಿ.ಎಲ್. ಮತ್ತು ತಂಡ, ತಾಲೂಕು ಆರೋಗ್ಯಾಧಿಕಾರಿ ಡಾ. ಇಂದುಧರ್ ಮತ್ತು ತಂಡ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವಜ್ಞಾ*, ಆಲೂರು ಸಿದ್ದಾಪುರ PHC ವೈದ್ಯಾಧಿಕಾರಿ ಡಾ. ಸುಪರ್ಣ ಕೃಷ್ಣಾನಂದಹಾಗೂ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಪರಿಶೀಲನೆ ವೇಳೆ ಹಾಜರಿದ್ದರು.