Kodagu

ಶನಿವಾರಸಂತೆ: ದುಂಡಳ್ಳಿ ಅರಿವು ಕೇಂದ್ರದಲ್ಲಿ ‘ಓದುವ ಬೆಳಕು’ ಸಂಭ್ರಮ

admincoorgdaily

ಶನಿವಾರಸಂತೆ: ದುಂಡಳ್ಳಿ ಅರಿವು ಕೇಂದ್ರದಲ್ಲಿ ‘ಓದುವ ಬೆಳಕು’ ಸಂಭ್ರಮ
ಶನಿವಾರಸಂತೆ:ಸಮೀಪದ ದುಂಡಳ್ಳಿ ಗ್ರಾ.ಪಂ. ಗ್ರಂಥಾಲಯ ಅರಿವು ಕೇಂದ್ರದಲ್ಲಿ ‘ಓದುವ ಬೆಳಕು’ ಕಾರ್ಯಕ್ರಮದಡಿ ಸೆಪ್ಟೆಂಬರ್ ತಿಂಗಳ ಚಟುವಟಿಕೆಗಳ ಸಂಭ್ರಮ ಕಾರ್ಯಕ್ರಮವನ್ನು ಅರಿವು ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.

ಶಿಕ್ಷಕರ ದಿನಾಚರಣೆ ಪ್ರಯುಕ್ತ ಧನ್ಯವಾದ ಕಾರ್ಡ್ ತಯಾರಿಕೆ, ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ದಿನದ ಮಹತ್ವದ ಬಗ್ಗೆ ಅರಿವು, ಇಂಜಿನಿಯರ್ ದಿನಾಚರಣೆ ಪ್ರಯುಕ್ತ ಕೌಶಲ್ಯದ ಬಗ್ಗೆ ಅರಿವು, ಅಂತಾರಾಷ್ಟ್ರೀಯ ಅಜ್ಜ-ಅಜ್ಜಿಯರ ದಿನಾಚರಣೆ ಪ್ರಯುಕ್ತ ಹಿರಿಯರ ಮಹತ್ವದ ಬಗ್ಗೆ ತಿಳುವಳಿಕೆ ಸೇರಿದಂತೆ ಜನಪದ ಗೀತೆ, ಕಥೆ ಹೇಳುವುದು, ಪೌರಾಣಿಕ ಕತೆ, ಕೌಶಲ್ಯ ಚಟುವಟಿಕೆಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲಾಯಿತು.

ಗ್ರಂಥಾಲಯ ಮೇಲ್ವಿಚಾರಕಿ ಎಸ್.ಪಿ. ದಿವ್ಯ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು. ಸಂಭ್ರಮ ಕಾರ್ಯಕ್ರಮದಲ್ಲಿ ಹಿರಿಯರಾದ ಕೆಂಚಮ್ಮ, ಶಾರದಮ್ಮ, ಗಂಗಮ್ಮ ಪಾಲ್ಗೊಂಡು ಮಕ್ಕಳಿಗೆ ಪೌರಾಣಿಕ ಕತೆಗಳು ಹಾಗೂ ಜನಪದ ಗೀತೆಗಳನ್ನು ಹೇಳಿಕೊಟ್ಟರು.