ಮಡಿಕೇರಿ ಸಮೀಪ ಕಾಟಕೇರಿ ಜಂಕ್ಷನ್ ಬಳಿ ಶಾಲಾ ಬಸ್ ಪಲ್ಟಿ; 6ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ
admincoorgdaily

ಮಡಿಕೇರಿ:ಮಡಿಕೇರಿ ಬಳಿಯ ಕಾಟಕೇರಿ ಜಂಕ್ಷನ್ ಹಾಗೂ ಮದೆನಾಡು ಮಾರ್ಗದಲ್ಲಿ B.G.S ಪಬ್ಲಿಕ್ ಸ್ಕೂಲ್ ಶಾಲಾ ಬಸ್ ಪಲ್ಟಿಯಾಗಿ ಅಪಘಾತಕ್ಕೀಡಾಗಿದೆ.
ಚಾಲಕನ ಅಜಾಗರೂಕತೆ ಹಾಗೂ ಅತಿ ವೇಗದ ಚಾಲನೆಯೇ ಅವಘಡಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ವೇಗವಾಗಿ ಬಂದ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಗ್ಗಿಗೆ ಮಗುಚಿ ಬಿದ್ದಿದೆ.
ಬಸ್ ನಲ್ಲಿದ್ದ ವಿದ್ಯಾರ್ಥಿಗಳ ಪೈಕಿ ಆರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಾಳು ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.