ಕುಶಾಲನಗರ ದಲ್ಲಿ ಸ್ಕೌಟ್ಸ್ , ಗೈಡ್ಸ್ ವತಿಯಿಂದ ಸಂಸ್ಥಾಪನಾ ದಿನಾಚರಣೆ: ಧ್ವಜ ಬಿಡುಗಡೆ
admincoorgdaily

ಕುಶಾಲನಗರ, ನ.7:
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆಯ ವತಿಯಿಂದ ಶನಿವಾರ ( ನ.7 ರಂದು ) ಕುಶಾಲನಗರ ಪುರಸಭಾ ಕಛೇರಿ ಆವರಣದಲ್ಲಿ ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ
ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ ಪ್ರವೀಣ್ ಸೋಮಪ್ಪ ದೇವರಗುಂಡ ಮಾತನಾಡಿ,
ಭಾರತದಲ್ಲಿ ಚದುರಿದ್ದ ವಿವಿಧ ಸ್ಕೌಟಿಂಗ್ ಮತ್ತು ಗೈಡಿಂಗ್ ಸಂಸ್ಥೆಗಳು 1950ರ ನವೆಂಬರ್ 7 ರಂದು ಒಗ್ಗೂಡಿ
'ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್' ಏಕೀಕೃತ ಸಂಸ್ಥೆ ಅಸ್ತಿತ್ವಕ್ಕೆ ಬಂದ ದಿನವನ್ನು ಸಂಸ್ಥಾಪನಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
"ಸಿದ್ಧರಾಗಿ- ಸದಾ ಸಿದ್ಧರಾಗಿ" ಎಂಬ ಸಂಕಲ್ಪದೊಂದಿಗೆ ಯಾವುದೇ ತುರ್ತು ಸಂದರ್ಭದಲ್ಲೂ ಯಾವುದೇ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸುವ ಮನೋಭಾವ ಹೊಂದಬೇಕು ಎಂದು ಅವರು ಕರೆ ನೀಡಿದರು.
ಧ್ವಜ ಚೀಟಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಪುರಸಭೆಯ ಮುಖ್ಯಾಧಿಕಾರಿ ಕೃಷ್ಣಪ್ರಸಾದ್,
ಸ್ಕೌಟ್ಸ್ ಮತ್ತು ಗೈಡ್ಸ್ ಆಂದೋಲನವು ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಶಿಸ್ತು, ಸಂಯಮ, ಸೇವಾ ಮನೋಭಾವ ಹಾಗೂ ದೇಶಪ್ರೇಮವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ವಿದ್ಯಾರ್ಥಿಗಳು
ಯಾವುದೇ ಕಷ್ಟದ ಸಮಯ ಬಂದರೂ ಧೃತಿಗೆಡದೆ ಎದುರಿಸುವ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಗೈಡ್ಸ್ ಸಂಸ್ಥೆಯ ಸಹಾಯಕ ಆಯುಕ್ತೆ ಸಿ.ಎಂ.ಸುಲೋಚನ, ಪ್ರತಿವರ್ಷ ನವೆಂಬರ್ 7 ರಂದು
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ
ಆಚರಿಸಲಾಗುತ್ತಿದೆ ಎಂದರು.
ಸ್ಕೌಟ್ಸ್, ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿಯೂ ಆದ ಪರಿಸರ ಸಂಘಟಕ ಟಿ.ಜಿ.ಪ್ರೇಮಕುಮಾರ್,
ಅಂಜೆಲಾ ವಿದ್ಯಾನಿಕೇತನ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಅನಿತಾ ಡಿ' ಸೋಜ, ಸ್ಕೌಟ್ಸ್, ಗೈಡ್ಸ್ ನ ಸ್ಥಳೀಯ ಸಂಸ್ಥೆಯ ಕಾರ್ಯಾಧ್ಯಕ್ಷ ಎ.ಎಸ್.ತಮ್ಮಯ್ಯ, ಕಾರ್ಯದರ್ಶಿ ಎಂ.ಎಸ್.ಗಣೇಶ್, ಕೋಶಾಧಿಕಾರಿ ಎನ್.ಎಸ್.ನರೇಶ್,
ಸಂಸ್ಥೆಯ ಪದಾಧಿಕಾರಿಗಳಾದ
ಇಂದಿರಾ ಮುತ್ತಣ್ಣ,
ಕೆ.ಬಿ.ಗಣೇಶ್, ಡಿ.ವಿ.ಗಣೇಶ್, ಎಂ.ಎಸ್.ಮಹೇಂದ್ರ, ರಾಧಾ,
ಪುರಸಭೆಯ
ಸಮುದಾಯ ಸಂಚಾಲಕಿ
ಆಲಿಯಾಬಾನು, ಕಿರಿಯ ಆರೋಗ್ಯ ನಿರೀಕ್ಷಕಿ ನಿಶಾ, ಸಮುದಾಯ ಸಂಚಾಲಕಿ ಅನುಷ,ಸ್ಯಾನಿಟರಿ ಸೂಪರ್ ವೈಸರ್ ಮೋಹನ್ ಕುಮಾರ್, ಸಿಬ್ಬಂದಿ ದಿವ್ಯ , ಶಾಲಾ ಶಿಕ್ಷಕಿಯರಾದ
ಬಿ.ಎನ್. ರೇಖಾ , ಭವ್ಯ, ಪಲ್ಲವಿ, ಅನುಷ,
ಮತ್ತಿತರರು ಇದ್ದರು.