ಫುಟ್ಬಾಲ್ ಪಂದ್ಯಾವಳಿಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ
admincoorgdaily


ಗೋಣಿಕೊಪ್ಪ :
ಜಿಲ್ಲಾ ಮಟ್ಟದ ಕ್ರೀಡಾಕೂಟ ಅನುಷ್ಠಾನ ಸಮಿತಿ ವತಿಯಿಂದ ಶಾಲಾ ವಿಭಾಗದಲ್ಲಿ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಸೆಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆಯ ಬಾಲಕರು ವಿಭಾಗ ಮಟ್ಟಕ್ಕೆ ಅಯ್ಕೆಗೊಂಡಿದ್ದಾರೆ.
ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ಕೊಡಗು,ಶಾಲಾ ಶಿಕ್ಷಣ ಇಲಾಖೆ,ದೈಹಿಕ ಶಿಕ್ಷಣ ವಿಭಾಗ,ಜಿಲ್ಲಾ ವಿಧ್ಯಾರ್ಥಿ ಕ್ರೀಡಾನಿಧಿ ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟ ಅನುಷ್ಠಾನ ಸಮಿತಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಶಾಲಾ ಕ್ರೀಡಾ ಸ್ಪರ್ಧೆಗಳು ನಡೆಯಿತು. ಕ್ರೀಡಾಕೂಟದಲ್ಲಿ 14 ವಯೋಮಿತಿ ಮತ್ತು 17 ವಯೋಮಿತಿಯ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಗೋಣಿಕೋಪ್ಪಲು ಸೆಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯ ವಿಧ್ಯಾರ್ಥಿಗಳು ಭಾಗವಹಿಸಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ವಿಭಾಗ ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.
ಸೆಂಟ್ ಥಾಮಸ್ ಶಾಲೆಯ ದೈಹಿಕ ಶಿಕ್ಷಕರಾದ ಸಂತೋಷ್ ಅವರು ತರಬೇತಿ ನೀಡಿದ್ದು. ಶಾಲೆಯ ಪ್ರಾಂಶುಪಾಲರಾದ ರೆ.ಫಾ. ಜೋಶಿ ಜೋನ್ ಮನಾಲೆಲ್, ವ್ಯವಸ್ಥಾಪಕರಾದ ಥಾಮಸ್ ಆಯಂಗುಡಿ,ಹಾಗೂ ಆಡಳಿತ ಅಧಿಕಾರಿ ಜೋಸೆಫ್ ಅಚ್ಚಂಡಿ ಅವರುಗಳು ಶಾಲ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿರುತ್ತಾರೆ. ವಿಧ್ಯಾರ್ಥಿಗಳ ಸಾಧನೆಗೆ ಜಿಲ್ಲೆಯ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.