Kodagu

ಬಿಟ್ಟಂಗಾಲದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಉದ್ಯೋಗ ಮಾಹಿತಿ ಕಾರ್ಯಕ್ರಮ ಹಾಗೂ ರೈತ ಕ್ಷೇತ್ರ ಪಾಠಶಾಲೆ

admincoorgdaily

ಬಿಟ್ಟಂಗಾಲದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಉದ್ಯೋಗ ಮಾಹಿತಿ ಕಾರ್ಯಕ್ರಮ ಹಾಗೂ ರೈತ ಕ್ಷೇತ್ರ ಪಾಠಶಾಲೆ
ವಿರಾಜಪೇಟೆ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ವಿರಾಜಪೇಟೆ ತಾಲೂಕು, ವಿರಾಜಪೇಟೆ ವಲಯದ ವತಿಯಿಂದ ಬಿಟ್ಟಂಗಾಲ ಸಮುದಾಯ ಭವನದಲ್ಲಿ ಸ್ವಉದ್ಯೋಗ ಮಾಹಿತಿ ಕಾರ್ಯಕ್ರಮ ಹಾಗೂ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.

   ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸ್ವಉದ್ಯೋಗದ ಕುರಿತು ಮಾಹಿತಿ ನೀಡಿದ ರಾಧಾ ಅವರು,"ನಿರುದ್ಯೋಗ ಎಂಬುದು ಸಮಸ್ಯೆಯಲ್ಲ, ಉದ್ಯೋಗ ಮಾಡುವವರಿಗೆ ನೂರೆಂಟು ಮಾರ್ಗಗಳಿವೆ. ನಾನು ಮನೆಯಲ್ಲೇ ಅಣಬೆ ಕೃಷಿ, ವಿವಿಧ ಆಹಾರ ಪದಾರ್ಥಗಳ ತಯಾರಿಕೆ, ಉಪ್ಪಿನಕಾಯಿ ಹಾಗೂ ಸಾಂಬಾರ ಪದಾರ್ಥಗಳ ತಯಾರಿಕೆಯಂತಹ ಹಲವು ಸ್ವಉದ್ಯೋಗಗಳನ್ನು ಕೈಗೊಂಡು ಯಶಸ್ವಿಯಾಗಿದ್ದೇನೆ. ಗ್ರಾಮೀಣ ಮಹಿಳೆಯರು ಇಂತಹ ಉದ್ಯೋಗಗಳನ್ನು ಮಾಡುವುದಕ್ಕೆ ಸಾಕಷ್ಟು ಅವಕಾಶಗಳಿವೆ ಎಂದು ತಿಳಿಸಿದರು.

   ಇದೇ ಸಂದರ್ಭದಲ್ಲಿ ಸ್ವಉದ್ಯೋಗಿಯಾಗಿರುವ ಸುಧಾ ಅವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಆರ್ಥಿಕ ನೆರವು ಪಡೆದು, ಸ್ವಉದ್ಯೋಗ ಆರಂಭಿಸಿ ಹೆಚ್ಚಿನ ಲಾಭ ಗಳಿಸುತ್ತಿರುವ ಅನುಭವ ಹಂಚಿಕೊಂಡರು. 

   ಬಿಟ್ಟಂಗಾಲ ಒಕ್ಕೂಟದ ಕೋಶಾಧಿಕಾರಿ ಪೊನ್ನಮ್ಮ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಮಾಡಲು ನೂರಾರು ದಾರಿಗಳಿದ್ದು, ಅವುಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು. ಗ್ರಾಮಾಭಿವೃದ್ಧಿ ಯೋಜನೆಯು ಇಂತಹ ತರಬೇತಿಗಳನ್ನು ನೀಡುವುದರಿಂದ ನಮಗೆ ಅತ್ಯಂತ ಉಪಯುಕ್ತವಾಗಿದೆ ಎಂದರು.

   ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕರಾದ ವಸಂತ್, ಸೇವಾ ಪ್ರತಿನಿಧಿ ಸಬೀತಾ, ಸಿ.ಎಸ್.ಸಿ. ಸೇವಾದಾರರಾದ ಲೌಲಿ, ಸಂಘದ ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.