ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಮಕ್ಕಳ ಮನೆಯಲ್ಲಿ ಸೇವಾ ಕಾರ್ಯಕ್ರಮ
admincoorgdaily

ವಿರಾಜಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ವಿರಾಜಪೇಟೆ ತಾಲೂಕು ಇದರ ವತಿಯಿಂದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 79ನೇ ಹುಟ್ಟುಹಬ್ಬದ ಪ್ರಯುಕ್ತ ವಿರಾಜಪೇಟೆ ವಲಯದ ಕೆದಮುಳ್ಳೂರಿನ 'ಕಿತಾರಿನ ಚಿತ್ತದಿನಿ ಮಕ್ಕಳ ಮನೆ'ಯಲ್ಲಿ ವಿಶೇಷ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಕ್ಕಳಿಗೆ ಹಣ್ಣುಹಂಪಲು ಹಾಗೂ ಹೊದಿಕೆಗಳನ್ನು ವಿತರಿಸಿ, ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಕ್ಕಳ ಮನೆಯ ಪಾಲಕರಾದ ಟ್ರೀಸಾ, ಮೇರಿ, ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಿನ ಯೋಜನಾಧಿಕಾರಿಗಳಾದ ಹರೀಶ್ ಪಿ., ವಲಯ ಮೇಲ್ವಿಚಾರಕರಾದ ಶಿವಕುಮಾರ್, ಸೇವಾಪ್ರತಿನಿಧಿಗಳಾದ ಪುಷ್ಪ, ತೇಜಸ್ವಿನಿ, ಮೀನಾಕ್ಷಿ, ಬಿಂದು, ಸಬಿತಾ, ಶಿಲ್ಪಾ, ಸುನಿತಾ, ಸಿ.ಎಸ್.ಸಿ ಸೇವಾದಾರರಾದ ಯಕ್ಷಿತಾ, ಲವ್ಲಿ ಹಾಗೂ ಒಕ್ಕೂಟದ ಅಧ್ಯಕ್ಷರು ಉಪಸ್ಥಿತರಿದ್ದರು.