ಕಾವೇರಿ ತೀರ್ಥೋದ್ಭವದಂದು ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅಭಿಮಾನಿ ಬಳಗದಿಂದ ಸೇವಾ ಕಾರ್ಯ : 3 ಸಾವಿರಕ್ಕೂ ಅಧಿಕ ಭಕ್ತರಿಗೆ ಹಣ್ಣು, ತಂಪು ಪಾನೀಯ, ಕಾಫಿ ವಿತರಣೆ
admincoorgdaily

ಮಡಿಕೇರಿ ಅ.18 : ಕಾವೇರಿ ತೀರ್ಥೋದ್ಭವದ ದಿನವಾದ ಶನಿವಾರ ಕಾವೇರಿ ದರ್ಶನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅಭಿಮಾನಿ ಬಳಗದ ವತಿಯಿಂದ ಹಣ್ಣು, ತಂಪು ಪಾನೀಯ, ಕಾಫಿ ಮತ್ತು ಕುಡಿಯುವ ನೀರನ್ನು ವಿತರಿಸಲಾಯಿತು.
ಭಾಗಮಂಡಲದ ತ್ರಿವೇಣಿ ಸಂಗಮದಿಂದ ತಲಕಾವೇರಿಯವರೆಗೆ ಸುಮಾರು 8 ಕಿ.ಮೀ. ದೂರವನ್ನು 3,000ಕ್ಕೂ ಅಧಿಕ ಭಕ್ತರು ಕಾಲ್ನಡಿಗೆಯಲ್ಲಿ ಕ್ರಮಿಸಿದರು. ಇವರೆಲ್ಲರಿಗೆ ಭಾಗಮಂಡಲ- ತಲಕಾವೇರಿ ಮಾರ್ಗಮಧ್ಯೆ ಇರುವ ಹನಿ ಡ್ಯೂ ಮಳಿಗೆ ಬಳಿ ಹಣ್ಣು ಹಂಪಲು, ತಂಪು ಪಾನೀಯ, ಕಾಫಿ ಹಾಗೂ ಕುಡಿಯುವ ನೀರನ್ನು ಒದಗಿಸುವ ಮೂಲಕ ಸೇವೆ ಸಲ್ಲಿಸಲಾಯಿತು. ಅಲ್ಲದೆ, ಭಕ್ತಾದಿಗಳು ವಿಶ್ರಾಂತಿ ಪಡೆಯಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಗಣ್ಯರಿಗೂ ವಿಶೇಷ ಖಾದ್ಯಗಳನ್ನು ವಿತರಿಸಲಾಯಿತು.
ನೈಸರ್ಗಿಕ ಪಾನೀಯಗಳು ಹಾಗೂ ಆಹಾರ ಪದಾರ್ಥಗಳ ವಿತರಣೆಯು ಭಕ್ತಾದಿಗಳ ಮೆಚ್ಚುಗೆಗೆ ಪಾತ್ರವಾಯಿತು. ಕಳೆದ ಎರಡು ವರ್ಷಗಳಿಂದ ಅಭಿಮಾನಿ ಬಳಗವು ಕಾವೇರಿ ತೀರ್ಥೋದ್ಭವದ ಸಂದರ್ಭ ಈ ಸೇವಾ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.
ಹನಿ ಡ್ಯೂ ಮಳಿಗೆಯ ಮಾಲೀಕ ಸುನಿಲ್ ಪತ್ರಾವೋ ಹಾಗೂ ಚೆಟ್ಟಿಮಾನಿ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಕೆ.ಯು.ಹಾರಿಸ್ ಅವರ ನೇತೃತ್ವದಲ್ಲಿ ಕಾವೇರಿ ಭಕ್ತರಿಗೆ ವಿಶೇಷ ಆತಿಥ್ಯ ನೀಡಲಾಯಿತು.
ಈ ಸೇವಾ ಕಾರ್ಯಕ್ಕೆ ಭಾಗಮಂಡಲ ಹೋಬಳಿಯ ದಾನಿಗಳಾದ ಮಂಗೇರಿರ ಜಗದೀಶ್ ಸೋಮಯ್ಯ, ಸಿ.ಎಸ್.ವೇಣುಗೋಪಾಲ್ (ಸರು), ಮಂಜುಳ ವೇಣುಗೋಪಾಲ್, ಕೆದಂಬಾಡಿ ಎಂ.ಹರೀಶ್, ಕೆದಂಬಾಡಿ ವಿಶು ಪ್ರವೀಣ್ ಕುಮಾರ್, ಕೋಳಿಬೈಲು ವೆಂಕಟೇಶ್, ಬೇಕಲ್ ರಮಾನಾಥ್, ಬಾಲಚಂದ್ರ ನಾಯರ್, ಇಂದುಮತಿ ರವೀಂದ್ರ, ನಾಪುಲೀರ ಕೀರ್ತಿ ಉತ್ತಪ್ಪ, ಹಂಸಕೋಡಿ, ರಶೀದ್ ಚೆಟ್ಟಿಮಾನಿ, ಹಿರಿಯರಾದ ಕೆದಂಬಾಡಿ ರಮೇಶ್, ಗೌರೀಶ್ ರೈ, ಲಕ್ಷö್ಮಣ್ ಹಾಗೂ ನಿಸಾರ್ ಎಂ.ಎ. ಸಹಕಾರ ನೀಡಿದರು.
ಕಾವೇರಿ ತೀರ್ಥೋದ್ಭವಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಹಣ್ಣು ಹಂಪಲು, ತಂಪು ಪಾನೀಯ, ಕಾಫಿ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಸೇವಾ ಮನೋಭಾವ ಮೆರೆದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅಭಿಮಾನಿ ಬಳಗ ಮತ್ತು ದಾನಿಗಳ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.