ಅಖಿಲ ಕರ್ನಾಟಕ ಕವನ ಸ್ಪರ್ಧೆಯಲ್ಲಿ ಕೊಡಗಿನ ಶಾಫಿ ಅನ್ವಾರಿ ಸಖಾಫಿಗೆ ದ್ವಿತೀಯ ಸ್ಥಾನ
admincoorgdaily

ನಾಪೋಕ್ಲು :ಕಾಸರಗೋಡು ಜಾಮಿಯಾ ಸಅದಿಯ್ಯಾ ವತಿಯಿಂದ ಆಯೋಜಿಸಲಾದ ಅಖಿಲ ಕರ್ನಾಟಕ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಕೊಡಗರಹಳ್ಳಿಯ ಶಾಫಿ ಅನ್ವಾರಿ ಸಖಾಫಿ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
‘ಕಾವ್ಯಧಾರೆ’ ಶೀರ್ಷಿಕೆಯಡಿ ಮುಹಮ್ಮದ್ ಪೈಗಂಬರ್ (ಸ.ಅ.) ಅವರ ಸೌಂದರ್ಯ ಮತ್ತು ಸ್ವಭಾವ ಎಂಬ ವಿಷಯದ ಕುರಿತು ಈ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕರ್ನಾಟಕದ ವಿವಿಧ ಜಿಲ್ಲೆಗಳಿಂದ 80 ಯುವ ಕವಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು,ಶಾಫಿ ಅನ್ವಾರಿ ಸಖಾಫಿ ದ್ವಿತೀಯ ಸ್ಥಾನ ಗಳಿಸಿ ಗಮನ ಸೆಳೆದಿದ್ದಾರೆ.
ಇವರ ಈ ಸಾಧನೆಗೆ ಗಣ್ಯರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಇವರು ಕೊಡಗರಹಳ್ಳಿ ಗ್ರಾಮದ ಮುಹಮ್ಮದ್ ಬಾಪು ಹಾಗು ಜೈನಬಾ ದಂಪತಿಯ ಪುತ್ರರಾಗಿದ್ದಾರೆ.
ವರದಿ :ಝಕರಿಯ ನಾಪೋಕ್ಲು