ಚೋಕಂಡಳ್ಳಿಯಲ್ಲಿ ಶಂಸುಲ್ ಉಲಮಾ ಮೌಲೀದ್; SKSSF ರಾಜ್ಯ ಉಪಾಧ್ಯಕ್ಷ ಸಅದ್ ಫೈಝಿ ಅವರಿಗೆ ಸನ್ಮಾನ
admincoorgdaily

ಚೋಕಂಡಳ್ಳಿ:SKSSF ಕೊಡಗು ಜಿಲ್ಲಾ ಸಮಿತಿ ನಿರ್ದೇಶದಂತೆ ಚೋಕಂಡಳ್ಳಿಯಲ್ಲಿ ಶಂಸುಲ್ ಉಲಮಾ ಮೌಲೀದ್ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಜರುಗಿತು.
ರಷೀದ್ ದಾರಿಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಝಿಯಾದ್ ದಾರಿಮಿ ಅವರು ಶಂಸುಲ್ ಉಲಮಾ ಅವರ ಜೀವನ ಚರಿತ್ರೆ ವಿವರಿಸಿದರು. ಎಲ್ಲಾ ಕಾರ್ಯಕರ್ತರು ಸಮಸ್ತದ ಅಧೀನದಲ್ಲಿ ಜೀವಿಸಿ ಎಲ್ಲರಿಗೂ ಮಾದರಿಯಾಗಬೇಕೆಂದು ಅವರು ಕರೆ ನೀಡಿದರು.
ಸಭೆಯಲ್ಲಿ SKSSF ರಾಜ್ಯ ಸಮಿತಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಸಅದ್ ಫೈಝಿ ಅವರನ್ನು ಸಮಸ್ತ ಕಾರ್ಯಕರ್ತರಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಅದ್ ಫೈಝಿ, ನೌಶಾದ್ ದಾರಿಮಿ, ಜೈನುದ್ದೀನ್ ಮುಸ್ಲಿಯಾರ್, ಜಿಯಾದ್ ಬಾಖವಿ, ಹಮೀದ್, ಆಶಿಕ್, ಉಸೇನ್, ಸಂಸುದ್ದೀನ್ ಮತ್ತಿತರರು ಹಾಜರಿದ್ದರು.
ಶಂಸುಲ್ ಉಲಮಾ ಮೌಲೀದ್ ನೇತೃತ್ವವನ್ನು ಜಿಯಾದ್ ಬಾಖವಿ ವಹಿಸಿದ್ದರು. ನಿರ್ವಾಹಕ ಕಾರ್ಯದರ್ಶಿ ನೌಶಾದ್ ದಾರಿಮಿ ವಂದಿಸಿದರು.