Kodagu

ಶನಿವಾರಸಂತೆ: ಸುಪ್ರಜ ಗುರುಕುಲ ಶಾಲೆಯಲ್ಲಿ ಛದ್ಮವೇಷ ಸ್ಪರ್ಧೆ

admincoorgdaily

ಶನಿವಾರಸಂತೆ: ಸುಪ್ರಜ ಗುರುಕುಲ ಶಾಲೆಯಲ್ಲಿ ಛದ್ಮವೇಷ ಸ್ಪರ್ಧೆ
ಶನಿವಾರಸಂತೆ: ಸ್ಥಳೀಯ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಪ್ರೀ-ಕೆಜಿಯಿಂದ ಎರಡನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳನ್ನು ಅತ್ಯಂತ ಸಂಭ್ರಮದಿಂದ ವಿವಿಧ ವೇಷಭೂಷಣಗಳನ್ನು ಹಾಕಿಸಿ ಕರೆದುಕೊಂಡು ಬಂದಿದ್ದರು. ಹಲವಾರು ಮಕ್ಕಳ ಉಡುಗೆ-ತೊಡುಗೆಗಳು ಕಣ್ಮನ ಸೆಳೆಯುವಂತಿದ್ದವು.

ತೀರ್ಪುಗಾರರಾಗಿ ವೇದಾವತಿ ವೇದಕುಮಾರ್, ವೀಣಾ ಚಿದಾನಂದ್, ಸವಿತಾ ಪ್ರತಾಪ್, ಶ.ಗ. ನಯನತಾರಾ, ಶಿಲ್ಪ ಸುರೇಶ್, ಅರ್ಪಿತ ಭುವನ್, ಶ್ವೇತಾ ವಸಂತ್, ಅನುಷಾ ಮಂಜುನಾಥ್, ಗುಣಶ್ರೀ ರಾಜು, ವಿದ್ಯಾಭರತ್, ಹೇಮಾ ಮುಳ್ಳೂರು, ಶರಣ್ ಕುಶಾಲನಗರ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಡಿ. ಸುಜಲಾದೇವಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.