Kodagu

ಶನಿವಾರಸಂತೆ: ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆಯಲ್ಲಿ ಪೌಷ್ಟಿಕತೆ-ಸ್ವಾಸ್ಥ್ಯ-ನೈರ್ಮಲ್ಯ ಸಂಭ್ರಮ

admincoorgdaily

ಶನಿವಾರಸಂತೆ: ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆಯಲ್ಲಿ ಪೌಷ್ಟಿಕತೆ-ಸ್ವಾಸ್ಥ್ಯ-ನೈರ್ಮಲ್ಯ ಸಂಭ್ರಮ
ಶನಿವಾರಸಂತೆ:ಸ್ಥಳೀಯ ಶ್ರೀ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆಯಲ್ಲಿ ಪೌಷ್ಟಿಕತೆ, ಸ್ವಾಸ್ಥ್ಯ ಮತ್ತು ನೈರ್ಮಲ್ಯ ವಿಷಯ ಕುರಿತು ಸಂಭ್ರಮ ಕಾರ್ಯಕ್ರಮ ಆಚರಿಸಲಾಯಿತು.
ಮುಖ್ಯ ಶಿಕ್ಷಕಿ ಸುಚಿತ್ರಾ ಕಾರ್ಯಕ್ರಮ ಉದ್ಘಾಟಿಸಿದರು.

ಶಿಕ್ಷಕ ಜಯಕುಮಾರ್ ಕೆ.ಪಿ. ಮಾತನಾಡಿ, "ಪೌಷ್ಟಿಕ ಆಹಾರ ಸೇವನೆ ಸದೃಢ ದೇಹ ಮತ್ತು ಸದೃಢ ಮನಸ್ಸಿನ ನಿರ್ಮಾಣ" ಎಂದು ಆರೋಗ್ಯದ ಮಾರ್ಗಸೂಚಿಗಳನ್ನು ತಿಳಿಸಿದರು.
ವಿಜ್ಞಾನ ಶಿಕ್ಷಕಿ ಸವಿತಾ ಆರೋಗ್ಯ ಮತ್ತು ಶುಚಿತ್ವ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಚಿತ್ರಕಲೆ, ಆಹಾರ ಪದಾರ್ಥಗಳ ವಿಂಗಡಣೆ, ಪೋಷಕಾಂಶಗಳಿಗೆ ಸಂಬಂಧಿಸಿದ ಚಾರ್ಟ್ ತಯಾರಿಕೆ, ಪ್ರತಿಜ್ಞಾವಿಧಿ ಸ್ವೀಕಾರ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಾಂಶುಪಾಲ ಮಹಮದ್ ಜಹೀರ್, ಶಿಕ್ಷಕರಾದ ಸಂದೇಶ್, ಆಂಜನಪ್ಪ, ಶ್ರೀಕಲಾ, ಬಶೀರಾ ಹಾಜರಿದ್ದರು.