ವಿರಾಜಪೇಟೆ ಐತಿಹಾಸಿಕ ಗೌರಿ-ಗಣೇಶ ಉತ್ಸವದ ವಿಸರ್ಜನೆಯ ಬಳಿಕ ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಶಾಂತಿ ಪೂಜೆ
admincoorgdaily

ವಿರಾಜಪೇಟೆ:ಐತಿಹಾಸಿಕ ವಿರಾಜಪೇಟೆ ಗೌರಿ-ಗಣೇಶ ಉತ್ಸವದ ವಿಸರ್ಜನಾ ಉತ್ಸವ ಯಶಸ್ವಿಯಾಗಿ ಮುಕ್ತಾಯಗೊಂಡ ಬಳಿಕ, ಬಸವೇಶ್ವರ ದೇವಸ್ಥಾನದ ಉತ್ಸವ ಸಮಿತಿ ವತಿಯಿಂದ ವಿಶೇಷ ಶಾಂತಿ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ನಗರದ ಜೈನರ ಬೀದಿಯಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಜರುಗಿದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಬಸವೇಶ್ವರ ಸ್ವಾಮಿಯ ನಂದಿ ವಿಗ್ರಹ ಮೂರ್ತಿಗೆ ವಿಶೇಷ ಮಹಾಪೂಜೆ ಹಾಗೂ ಶಾಂತಿ ಪೂಜೆ ಸಲ್ಲಿಸಲಾಯಿತು. ಉತ್ಸವವು ಯಾವುದೇ ವಿಘ್ನಗಳಿಲ್ಲದೆ ಶಾಂತಿಯುತವಾಗಿ ನೆರವೇರಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ, ಊರಿನಲ್ಲಿ ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಲಾಯಿತು.
ಪಾನಕ ಹಾಗೂ ಕೋಸಂಬರಿ ವಿತರಣೆ:
ಪೂಜಾ ಕಾರ್ಯಕ್ರಮದ ಮುಕ್ತಾಯದ ಬಳಿಕ ದೇವಸ್ಥಾನದ ಸಮಿತಿ ವತಿಯಿಂದ ಸೇರಿದ್ದ ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ಸಾಂಪ್ರದಾಯಿಕವಾಗಿ ಕೋಸಂಬರಿ ಹಾಗೂ ಪಾನಕವನ್ನು ವಿತರಿಸಲಾಯಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ರವಿಂಧ್ರನಾಥ್ ಕಾಮಥ್, ಉಪಾಧ್ಯಕ್ಷರಾದ ಪುಷ್ಪರಾಜ್ ಜೈನ್, ಸಂಪತ್, ಕಾರ್ಯದರ್ಶಿ ಜೆ.ಎನ್. ಪ್ರಸಾದ್, ವಿ.ಆರ್. ಪುರುಷೋತ್ತಮ್, ಜೆ.ಪಿ. ಅರುಣ್ ಜೈನ್, ಸದಸ್ಯರಾದ ಜೆ.ವಿ. ಪ್ರಕಾಶ್, ಡಾ.ಎನ್. ವೀರೇಂದ್ರ ಕಾಮತ್, ನರೇಂದ್ರ ಕಾಮತ್, ಚಂದ್ರ ಪ್ರಸಾದ್, ರಾಜೇಂದ್ರ ಕಾಮತ್ ಸೇರಿದಂತೆ ಆಡಳಿತ ಮಂಡಳಿಯವರು ಉತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ದೇವಾಲಯದ ಅರ್ಚಕರಾದ ಮೋಹನ್, ಸುಹಾಶ್ ಸೇರಿದಂತೆ ಅರ್ಚಕ ವೃಂದದವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.