ಮೇಜರ್ ಆಗಿ ಪದೋನ್ನತಿ ಪಡೆದ ಶರಣ್ಯ ರಾವ್
admincoorgdaily

ವಿರಾಜಪೇಟೆ:ಭಾರತೀಯ ಭೂಸೇನೆಯಲ್ಲಿ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವಿರಾಜಪೇಟೆ ಸಮೀಪದ ಕುಕ್ಲೂರು ಗ್ರಾಮದವರಾದ ಶರಣ್ಯ ರಾವ್ ಎಚ್ ಅವರು ಮೇಜರ್ ಆಗಿ ಬಡ್ತಿ ಪಡೆದಿದ್ದಾರೆ.
ಸಮೀಪದ ಕುಕ್ಲೂರು ಗ್ರಾಮದವರಾದ ಶರಣ್ಯ ರಾವ್ ಎಚ್ ಅವರು ರಾಜಸ್ಥಾನದ ಜೈಸಲ್ಮೇರ್‌ನ ರ‍್ಮರ‍್ಡ್ ವರ್ಕ್ ಶಾಪ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು 2021 ನವೆಂಬರ್ ನಲ್ಲಿ ಚೆನ್ನೈನ ಆಫಿರ‍್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಭಾರತೀಯ ಸೇನೆಯ ಇಎಂಇ ಕರ‍್ಪ್ಸ್ ಕಮಿಷನ್ ಹೊಂದಿದ್ದರು.
ಮೇ. ಶರಣ್ಯ ರಾವ್ ಎಚ್ ಅವರು ಸಮೀಪದ ಕುಕ್ಲೂರು ಗ್ರಾಮದ ಹರೀಶ್ ರಾವ್ ಎಸ್ ಹಾಗೂ ಶಿಕ್ಷಕಿ ಮೈಥಿಲಿ ರಾವ್ ಎಚ್ ಅವರು ಪುತ್ರಿ ಹಾಗೂ ಪಲ್ಲವಿ ರಾವ್ ಎಚ್ ಅವರ ಹಿರಿಯ ಸಹೋದರಿ
ಶರಣ್ಯ ರಾವ್ ಎಚ್ ಅವರು ವಿರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆ ಶಾಲಾ, ಕಾವೇರಿ ಕಾಲೇಜಿನಲ್ಲಿ ಪಿ.ಯು, ಇಂಜಿನಿಯರಿಂಗ್ ಪದವಿಯನ್ನು ಪೊನ್ನಂಪೇಟೆಯ ಸಿಐಟಿ ವಿದ್ಯಾಸಂಸ್ಥೆಯಲ್ಲಿ ಪಡೆದು ಬಳಿಕ ಮೂಡುಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಎಂ.ಎಸ್.ಡಬ್ಲ್ಯೂ ಪದವಿಯನ್ನು ಪಡೆದುಕೊಂಡಿದ್ದಾರೆ.