Kodagu

ಶಿರಂಗಾಲ ಪಿಯು ಕಾಲೇಜು ರೂವಾರಿ ಎಸ್.ವಿ.ನಂಜುಂಡಪ್ಪ ನಿಧನ

admincoorgdaily

ಶಿರಂಗಾಲ ಪಿಯು ಕಾಲೇಜು ರೂವಾರಿ ಎಸ್.ವಿ.ನಂಜುಂಡಪ್ಪ ನಿಧನ
ಕೂಡಿಗೆ:  ಕೊಡಗಿನ ಗಡಿ ಭಾಗವಾದ ಶಿರಂಗಾಲ ಗ್ರಾಮದ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರೂ ಆಗಿದ್ದು, ಶಿರಂಗಾಲ ಸರ್ಕಾರಿ ಪಿಯೂ ಕಾಲೇಜು ಆರಂಭಕ್ಕೆ ಶ್ರಮಿಸಿದ್ದು, ತಮ್ಮನ್ನು ಸದಾ ಸಾಮಾಜಿಕ ಚಟುವಟಿಕೆಗಳಲ್ಲಿ  ತೊಡಗಿಸಿಕೊಂಡಿದ್ದ  ಎಸ್.ವಿ.ನಂಜುಂಡಪ್ಪ (94 ವರ್ಷ ) ಅವರು ಸೋಮವಾರ  ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ವಯೋ ಸಹಜ ಕಾಯಿಲೆಯಿಂದ ನಿಧನ ಹೊಂದಿದ್ದಾರೆ.

         ಮೃತರ ಅಂತ್ಯ ಸಂಸ್ಕಾರವು ಮಂಗಳವಾರ  ಸ್ವಗ್ರಾಮ ಶಿರಂಗಾಲ ಗ್ರಾಮದಲ್ಲಿ ನಡೆಯಿತು.
 ಮೃತರ ನಿಧನಕ್ಕೆ ವೀರಶೈವ ಸಮಾಜ, ಶಿರಂಗಾಲ ಶ್ರೀ ಮಂಟಿಗಮ್ಮ ದೇವಸ್ಥಾನ ಸಮಿತಿ , ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ  ಗ್ರಾಮಸ್ಥರು ತೀವ್ರ ಸಂತಾಪ ಸೂಚಿಸಿದ್ದಾರೆ.
          ಮೃತರು ಪತ್ನಿ ನಂಜಮ್ಮ ಸೇರಿದಂತೆ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
            ಅರಮೇರಿ‌ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ ಅಂತಿಮ ದರ್ಶನ ಪಡೆದರು.