Kodagu

ಕರಡಿಗೋಡಿನಲ್ಲಿ ಶಾರ್ಟ್ ಸರ್ಕ್ಯೂಟ್ ಅವಘಡ; ಮನೆಯಲ್ಲಿದ್ದ ಮಹಿಳೆ, ಮಗು ಪಾರು

admincoorgdaily

ಕರಡಿಗೋಡಿನಲ್ಲಿ ಶಾರ್ಟ್ ಸರ್ಕ್ಯೂಟ್ ಅವಘಡ; ಮನೆಯಲ್ಲಿದ್ದ ಮಹಿಳೆ, ಮಗು ಪಾರು

*ಸಿದ್ದಾಪುರ:* ಕರಡಿಗೋಡು ಗ್ರಾಮದ ಹೊಳೆಕರೆಯ ಪೈಸಾರಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿ ಮನೆಗೆ ಭಾಗಶಃ ಹಾನಿಯಾಗಿದೆ.

ಇಲ್ಲಿನ ನಿವಾಸಿ ಶಣ್ಮುಗಂ ಎಂಬವರು ಹಿರಿಯ ಮಗಳ ಹೆರಿಗೆ ಸಂಬಂಧ ಪತ್ನಿಯೊಂದಿಗೆ ತಮಿಳುನಾಡಿಗೆ ತೆರಳಿದ್ದರು. ಮನೆಯಲ್ಲಿ ಎರಡನೇ ಮಗಳು ಪ್ರವೀಣ ಮತ್ತು ಮೊಮ್ಮಗು ಮಾತ್ರ ಇದ್ದರು.

ವಿದ್ಯುತ್ ಮೀಟರ್ ಬಳಿ ಕಾಣಿಸಿಕೊಂಡ ಬೆಂಕಿ ಏಕಾಏಕಿ ಮನೆಗೆ ವ್ಯಾಪಿಸಿದೆ. ಮನೆಯಲ್ಲಿದ್ದ ಪ್ರವೀಣ ಅವರು ಮಗುವಿನೊಂದಿಗೆ ತಕ್ಷಣ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಕಿಯಿಂದಾಗಿ ಟಿ.ವಿ., ಫ್ರಿಜ್ ಸೇರಿದಂತೆ ಮನೆಯ ವಸ್ತುಗಳು ಸುಟ್ಟು ಭಸ್ಮವಾಗಿವೆ. ಸ್ಥಳೀಯರು ಸಕಾಲದಲ್ಲಿ ಬೆಂಕಿ ನಂದಿಸಿದ್ದಾರೆ.
ಘಟನಾ ಸ್ಥಳಕ್ಕೆ ಠಾಣಾಧಿಕಾರಿ ಇ. ಮಂಜುನಾಥ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.