ಬೆಮ್ಮತ್ತಿ ಹಯಾತುಲ್ ಇಸ್ಲಾಂ ಮದರಸದಿಂದ ಶ್ರಮದಾನ
admincoorgdaily

ಗೋಣಿಕೊಪ್ಪ:ಸಮೀಪದ ಬೆಮ್ಮತ್ತಿ ಹಯಾತುಲ್ ಇಸ್ಲಾಂ ಮದರಸ ವತಿಯಿಂದ 1501 ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮ ದಿನದ ಅಂಗವಾಗಿ ಗೋಣಿಕೊಪ್ಪಲು ಸಮೀಪದ ಮಾಯಮುಡಿ ಕೋಣನಕಟ್ಟೆ ಮುಖ್ಯರಸ್ತೆಯಲ್ಲಿರುವ ಗುಂಡಿಗಳನ್ನು ಸರಿಪಡಿಸಿ ಸಂಚಾರಕ್ಕೆ ಮುಕ್ತ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಮಿಲಾದ್ ಸಮಿತಿಯ ಅಧ್ಯಕ್ಷರಾದ ಮಯಮುಟ್ಟಿ ಮತ್ತು ಮಹ್ರೂಫ್ ನೇತೃತ್ವದಲ್ಲಿ ಊರಿನ ಯುವಕರು ಸೇರಿ ಸಾಮಾಜಮುಖಿ ಕೆಲಸಕ್ಕೆ ಕೈ ಜೋಡಿಸಿದರು.