ಗಾಂಧಿ ಜಯಂತಿ ಪ್ರಯುಕ್ತ ಬಿಲ್ಲವ ಸಮಾಜ ನಾಪೋಕ್ಲುವಿನ ಮಹಿಳಾ ಘಟಕದಿಂದ ಶ್ರಮದಾನ
admincoorgdaily


ಮಡಿಕೇರಿ: ಗಾಂಧಿ ಜಯಂತಿ ಪ್ರಯುಕ್ತ ನಾಪೋಕ್ಲು ಅಜ್ಜಿಮುಟ್ಟ ಸರ್ಕಾರಿ ಶಾಲೆಯಲ್ಲಿ ನಾಪೋಕ್ಲು ಬಿಲ್ಲವ ಸಮಾಜದ ಮಹಿಳಾ ಘಟಕದ ವತಿಯಿಂದ ಶ್ರಮದಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಮಹಾತ್ಮ ಗಾಂಧೀಜಿಯವರ ಸ್ವಚ್ಛತೆ, ಸೇವೆ ಹಾಗೂ ಸಮಾಜಮುಖಿ ಚಿಂತನೆಗಳನ್ನು ಪಾಲಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಸದಸ್ಯರು ಉತ್ಸಾಹದಿಂದ ಭಾಗವಹಿಸಿ ಶಾಲಾ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಸೇವೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಅಧ್ಯಕ್ಷರಾದ ರಮ್ಯ ಬಿ.ಎಸ್., ಉಪಾಧ್ಯಕ್ಷರಾದ ದೇವಕ್ಕಿ ಬಿ.ಕೆ. ಹಾಗೂ ರೀಣಾ ಜಗನ್ನಾಥ್, ಕಾರ್ಯದರ್ಶಿ ಕವಿತ ರಾಜೇಶ್, ಸದಸ್ಯರಾದ ಶೀಲಾ ಡಿ.ಪಿ., ಚಂದ್ರಾವತಿ ಬಿ.ಬಿ., ವನಿತ ಬಿ.ಎಂ., ನಳಿನಿ, ದಿವ್ಯ ಬಿ.ಹೆಚ್., ಕವಿತ, ಗಂಗೆ, ಗೌರಿ, ದಾಮಿನಿ, ಆಶಾ ಲಿಂಗಪ್ಪ, ಹೋಶಿಕ, ದಿವ್ಯ, ರೇವತಿ ಹಾಗೂ ಪ್ರಿಯದರ್ಶಿನಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅಜ್ಜಿಮುಟ್ಟ ಸರ್ಕಾರಿ ಶಾಲೆಯ ಶಿಕ್ಷಕಿ ಪುಷ್ಪಾವತಿ ಧನಂಜಯ ಉಪಸ್ಥಿತರಿದ್ದರು.