Kodagu

ಸಿದ್ದಾಪುರ: ಜಿಲ್ಲಾ ಮಟ್ಟದ ರಿಲೇಯಲ್ಲಿ ಅಮ್ಮತ್ತಿ ಗುಡ್ ಶೆಫರ್ಡ್ ಶಾಲೆಗೆ ಪ್ರಥಮ

admincoorgdaily

ಸಿದ್ದಾಪುರ: ಜಿಲ್ಲಾ ಮಟ್ಟದ ರಿಲೇಯಲ್ಲಿ ಅಮ್ಮತ್ತಿ ಗುಡ್ ಶೆಫರ್ಡ್ ಶಾಲೆಗೆ ಪ್ರಥಮ
ಸಿದ್ದಾಪುರ: ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಶಾಲಾ ಮೈದಾನದಲ್ಲಿ ನಡೆದ ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ 400x100 ಮೀ. ರಿಲೇ ಸ್ಪರ್ಧೆಯಲ್ಲಿ ಅಮ್ಮತ್ತಿಯ ಗುಡ್ ಶೆಫರ್ಡ್ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಗುಡ್ ಶೆಫರ್ಡ್ ಶಾಲೆಯ ವಿದ್ಯಾರ್ಥಿಗಳಾದ ಅಭಿನವ್, ಅವಿನಾಶ್, ಜೊಶು, ಸಿನಾನ್ ಅವರು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ.