Kodagu

ಸಿದ್ದಾಪುರ;ಕಾವೇರಿ ಒಡಲು ಸೇರುತ್ತಿದೆ ಇಂಗು ಗುಂಡಿ ನೀರು

admincoorgdaily

ಸಿದ್ದಾಪುರ;ಕಾವೇರಿ ಒಡಲು ಸೇರುತ್ತಿದೆ ಇಂಗು ಗುಂಡಿ ನೀರು
ಸಿದ್ದಾಪುರ: ಗ್ರಾಮ ಪಂಚಾಯಿತಿ ನಿರ್ಮಿಸಿದ ಅವೈಜ್ಞಾನಿಕ ಇಂಗು ಗುಂಡಿ ಸಕಲ ಜೀವ ಜಂತುಗಳಿಗೆ ಕಂಟಕವಾಗಿದೆ.

ವಿರಾಜಪೇಟೆ ತಾಲೂಕಿನ  ಕರಡಿಗೋಡು ಗ್ರಾಮದ ಮಹಮ್ಮದಾಲಿ ಅಂಗಡಿ ಬಳಿ ಸುಮಾರು 10 ಕುಟುಂಬಗಳಿಗೆ ಪಂಚಾಯಿತಿ ನದಿ ತೀರದಲ್ಲಿ ಈ ಇಂಗು ಗುಂಡಿ ನಿರ್ಮಾಣ ಮಾಡಿತ್ತು.
ಅಂದಾಜು 5 ಕಾಂಕ್ರೀಟ್ ರಿಂಗ್ ಅಳವಡಿಸಿದ್ದು, ಇಂಗು ಗುಂಡಿಗೆ ಅನುಸರಿಸಬೇಕಿದ್ದ ಯಾವುದೇ ಕ್ರಮಗಳನ್ನು ಅನುಸರಿಸಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.

ನದಿಯಿಂದ ಅಂದಾಜು 5 ಅಡಿ ದೂರದಲ್ಲಿ ನಿರ್ಮಿಸಲಾಗಿರುವ ಈ ಗುಂಡಿಯು ಕಳೆದ 3 ವರ್ಷಗಳಿಂದ ತುಂಬಿ ಕೊಳಚೆ ನೀರು ನೇರವಾಗಿ ನದಿಗೆ ಸೇರುತ್ತಿದ್ದು, ಜಲಮೂಲಗಳನ್ನು ಸಂರಕ್ಷಿಸಬೇಕಾದ ಗ್ರಾಮ ಪಂಚಾಯಿತಿ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ವಿಪರ್ಯಾಸವಾಗಿದೆ.

ವರದಿ;ಕೃಷ್ಣ, ಸಿದ್ದಾಪುರ