Kodagu

ಸಿಂಚನ ಯೋಗ ಸಾಧನೆ ವಿದ್ಯಾಥಿ೯ಗಳಿಗೆ ಪ್ರೇರಣದಾಯಕ

admincoorgdaily

ಸಿಂಚನ  ಯೋಗ ಸಾಧನೆ  ವಿದ್ಯಾಥಿ೯ಗಳಿಗೆ ಪ್ರೇರಣದಾಯಕ
ಮಡಿಕೇರಿ; ಕಾಟಕೇರಿಯ   ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮದೆ  ಇವುಗಳ ಸಮ್ಮಿಲನದೋಂದಿಗೆ ಯೋಗ ಸಿಂಚನ ಕಾರ್ಯಕ್ರಮ ಆಯೋಜಿಸಲ್ಪಟ್ಟಿತ್ತು.   ವಿವಿಧ ಯೋಗ ಭಂಗಿಗಳನ್ನು    ವಿದ್ಯಾಥಿ೯ಗಳು, ಹಿರಿಯರ ಸಮ್ಮುಖದಲ್ಲಿ ಸಿಂಚನ  ಪ್ರದಶಿ೯ಸಿದಳು.

 ಮದೆನಾಡಿನ ಶಾಲಾ ಮುಖ್ ಶಿಕ್ಷಕ ಬಾಲಕೖಷ್ಣ   ಮಾತನಾಡಿ,  ಸಿಂಚನ   ನಡೆಸಿಕೊಟ್ಟ ಯೋಗ ಕಲಾ ಪ್ರದರ್ಶನವು ಅದ್ಭುತವಾಗಿತ್ತು. ಯೋಗವನ್ನು ಅಭ್ಯಾಸ ಮಾಡಲು ಸಿಂಟನ    ತೆಗೆದುಕೊಂಡ ದಿಟ್ಟ ನಿರ್ಧಾರ ಹಾಗೂ ಅತೀ ಚಿಕ್ಕ ವಯಸ್ಸಿನಲ್ಲಿ ಹಲವು ವಿಶ್ವ ದಾಖಲೆ ಗಳ ಮೂಲಕ  ಈಕೆ  ಹಲವು ಪ್ರಸಸ್ತಿ ಗಳನ್ನು ಪಡೆದಿರುವುದು  ಕೊಡಗಿಗೇ ಹೆಮ್ಮೆ ತಂದಿದೆ.   ಸಿಂಚನಳ ಯೋಗಸಾಧನೆ  ವಿದ್ಯಾಥಿ೯ಗಳಿಗೆ ಪ್ರೇರಣಾದಾಯಕವಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಟಕೇರಿಯ ಮುಖ್ಯಶಿಕ್ಷಕಿ  ಗೌರಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಲಿಕಟ್ಟೆ ಮದೆನಾಡಿನ ಮುಖ್ಯಶಿಕ್ಷಕ   ಬಾಲಕೃಷ್ಣ, , ಮಾಜಿ ಯೋಧ ಕಿಮ್ಮುಡಿರ ಶಿವಪ್ರಕಾಶ್, ಮಕ್ಕಳ ಪೋಷಕರು, ಗ್ರಾಮಸ್ಥರು  ,ಸಿಂಚನ ಪೋಷಕರಾದ ಕೀತಿ೯ , ರೇಣುಕಾ ಹಾಜರಿದ್ದರು.