SIR KARNATAKA

ಎಸ್ಐಆರ್: 10,953 ನೋಟಿಸ್ ವಿತರಣೆ, 47,930 ಬಾಕಿ

admincoorgdaily

ಎಸ್ಐಆರ್: 10,953 ನೋಟಿಸ್ ವಿತರಣೆ, 47,930 ಬಾಕಿ
ಮಡಿಕೇರಿ: ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಸಂಬಂಧ ಒಟ್ಟು 58,893 ಮಂದಿಗೆ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

ಕ್ಷೇತ್ರವಾರು 208-ಮಡಿಕೇರಿಯಲ್ಲಿ 18,785 ಹಾಗೂ 209-ವಿರಾಜಪೇಟೆಯಲ್ಲಿ 40,108 ಮಂದಿಯ ದಾಖಲೆಗಳಲ್ಲಿ ಲೋಪ ಕಂಡುಬಂದಿದ್ದು, ಇದರಲ್ಲಿ 35,810 Anomalies ಹಾಗೂ 23,083 No Mapping ಪ್ರಕರಣಗಳಿವೆ.

10,953 ನೋಟಿಸ್ ವಿತರಣೆ, 47,930 ಬಾಕಿ:

04-09-2026 ರವರೆಗೆ ಮಡಿಕೇರಿ ಕ್ಷೇತ್ರದ 5,091 ಹಾಗೂ ವಿರಾಜಪೇಟೆ ಕ್ಷೇತ್ರದ 5,862 ಸೇರಿ ಒಟ್ಟು 10,953 ನೋಟಿಸ್ ವಿತರಣೆಯಾಗಿದ್ದು, ಇನ್ನೂ 47,930 ನೋಟಿಸ್ ವಿತರಣೆ ಬಾಕಿ ಇದೆ. ವಿಚಾರಣೆಗೆ 73ಕ್ಕೂ ಅಧಿಕ ಸಹಾಯಕ ನೋಂದಣಾಧಿಕಾರಿಗಳನ್ನು ನೇಮಿಸಲಾಗಿದೆ.

ಅರ್ಹತಾ ದಿನಾಂಕ 01-10-2026 ಆಗಿದ್ದು, ಹಕ್ಕು ಮತ್ತು ಆಕ್ಷೇಪಣೆಗಳನ್ನು 24-08-2026 ರಿಂದ 23-09-2026 ರವರೆಗೆ ಸಲ್ಲಿಸಬಹುದು.