SIR KARNATAKA

ಎಸ್ಐಆರ್; ಕೊಡಗು ಜಿಲ್ಲೆಯಲ್ಲಿ 26,204 ಮತದಾರರ ವಿಚಾರಣೆ ಪೂರ್ಣ

admincoorgdaily

ಸಾಂದರ್ಭಿಕ ಚಿತ್ರ
ಮಡಿಕೇರಿ:ಕೊಡಗು ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಎರಡು ಕ್ಷೇತ್ರಗಳಲ್ಲಿ ಒಟ್ಟು 58,893 ಮತದಾರರಿಗೆ  ನೋಟೀಸ್ ಜನರೇಟ್ ಮಾಡಲಾಗಿದೆ.

ಸೆ.17ರವರೆಗೆ, 58,093 ನೋಟೀಸ್‌ಗಳನ್ನು ವಿತರಿಸಲಾಗಿದೆ. 790 ನೋಟೀಸ್ ವಿತರಣೆ ಬಾಕಿ ಇದೆ. ವಿತರಿಸಿದ ನೋಟೀಸ್‌ಗಳಲ್ಲಿ 26,204 ಮಂದಿಯ ವಿಚಾರಣೆ ಪೂರ್ಣಗೊಂಡಿದೆ.

ಮಡಿಕೇರಿ ಕ್ಷೇತ್ರದಲ್ಲಿ 18,785 ಮಂದಿಗೆ ನೋಟೀಸ್ ಜನರೇಟ್ ಆಗಿದ್ದು, 18,264 ವಿತರಣೆ ಮತ್ತು 7,431 ವಿಚಾರಣೆ ಪೂರ್ಣಗೊಂಡಿದೆ. ವಿರಾಜಪೇಟೆ ಕ್ಷೇತ್ರದಲ್ಲಿ 40,108 ಮಂದಿಗೆ ನೋಟೀಸ್ ಜನರೇಟ್ ಆಗಿದ್ದು, 39,829 ವಿತರಣೆ ಮತ್ತು 18,773 ವಿಚಾರಣೆ ಪೂರ್ಣಗೊಂಡಿದೆ.

ನೋಟೀಸ್ ನೀಡಲಾದ  ಪ್ರಕರಣಗಳಲ್ಲಿ 35,810 ಲಾಜಿಕಲ್ ‌ಡಿಸ್ಕ್ರಿಪೆನ್ಸಿ  ಮತ್ತು 23,083  ನೋ ಮ್ಯಾಪಿಂಗ್ ಪ್ರಕರಣಗಳು ಸೇರಿವೆ. ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು 73 ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಿಸಲಾಗಿದೆ.