ಎಸ್ಐಆರ್: ಕೊಡಗು ಜಿಲ್ಲೆಯಲ್ಲಿ 58,883 ಮತದಾರರಿಗೆ ನೋಟೀಸ್ ವಿತರಣೆ ಪೂರ್ಣ: 15,787 ಮತದಾರರ ವಿಚಾರಣೆ ಬಾಕಿ
admincoorgdaily

ಮಡಿಕೇರಿ:ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಹಾಗೂ ನೋ ಮ್ಯಾಪಿಂಗ್ ಅಡಿಯಲ್ಲಿ ಗುರುತಿಸಲಾಗಿರುವ ಕೊಡಗು ಜಿಲ್ಲೆಯ 58,883 ಮತದಾರರಿಗೆ ನೋಟೀಸ್ ವಿತರಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ 567 ಮತಗಟ್ಟೆಗಳಿದ್ದು,562 ಮತಗಟ್ಟೆಗಳ ಮತದಾರರಿಗೆ ನೋಟಿಸ್ ಒಟ್ಟು 58,883 ನೋಟಿಸ್‌ಗಳನ್ನು ಜನರೇಟ್ ಮಾಡಲಾಗಿತ್ತು. ಜನರೇಟ್ ಆದ ಎಲ್ಲಾ 58,883 ನೋಟಿಸ್‌ಗಳನ್ನು ವಿತರಣೆ ಮಾಡಲಾಗಿದೆ.ರಾಜ್ಯದಲ್ಲಿ 100% ನೋಟಿಸ್ ವಿತರಣೆ ಮಾಡಿದ 11 ಜಿಲ್ಲೆಗಳಲ್ಲಿ ಕೊಡಗು ಕೂಡ ಒಂದಾಗಿದೆ.
ವಿತರಣೆಯಾದ ನೋಟಿಸ್‌ಗಳ ಪೈಕಿ ಇದುವರೆಗೆ 43,096 ಮಂದಿಯ ಹಿಯರಿಂಗ್ ಪ್ರಕ್ರಿಯೆ ಪೂರ್ಣಗೊಂಡಿದ್ದು, 15,787 ಮಂದಿಯ ಹಿಯರಿಂಗ್ ಬಾಕಿ ಇದೆ. ಹಿಯರಿಂಗ್ ಪ್ರಕ್ರಿಯೆಯಲ್ಲಿ ಜಿಲ್ಲೆ ಶೇ.73.19 ರಷ್ಟು ಪ್ರಗತಿ ಸಾಧಿಸಿದೆ.
ಹೊಸ ಮತದಾರರ ನೋಂದಣಿಗೆ 5,416 ಅರ್ಜಿ ಸಲ್ಲಿಕೆ;
ಜೂನ್ 16 ರಿಂದ ಸೆಪ್ಟೆಂಬರ್ 24 ರವರೆಗಿನ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 24,053 ಫಾರ್ಮ್‌ಗಳು ಸಲ್ಲಿಕೆಯಾಗಿವೆ.
ಹೊಸ ಮತದಾರ ನೋಂದಣಿ (FORM-6) 5,416,
ವಿದೇಶದಲ್ಲಿರುವ ಮತದಾರರ ನೋಂದಣಿ (FORM-6A) 22,
ಹೆಸರು ತೆಗೆಯಲು (FORM-7): 696,ತಿದ್ದುಪಡಿ ಮತ್ತು ಸ್ಥಳ ಬದಲಾವಣೆ (FORM-8): 17,919 ಮತದಾರರು ಅರ್ಜಿ ಸಲ್ಲಿಸಿದ್ದಾರೆ.