ಎಸ್ಐಆರ್: ಕೊಡಗಿನಲ್ಲಿ 58,883 ಮಂದಿಗೆ ನೋಟಿಸ್ ಜನರೇಟ್ - 21,323 ವಿತರಣೆ ಬಾಕಿ
admincoorgdaily

ಮಡಿಕೇರಿ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಅಡಿಯಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ (ಅನಾಮಲೀಸ್) ಮತ್ತು ನೋ ಮ್ಯಾಪಿಂಗ್ ಕಾರಣದಿಂದ ಕೊಡಗು ಜಿಲ್ಲೆಯಲ್ಲಿ ಒಟ್ಟು 58,893 ಮಂದಿಗೆ ನೋಟಿಸ್ ನೀಡಲು ಗುರುತಿಸಲಾಗಿದೆ.
ಜಿಲ್ಲಾಡಳಿತದ ಅಧಿಕೃತ ವರದಿ ಪ್ರಕಾರ, ಇದರಲ್ಲಿ ಅನಾಮಲೀಸ್ 35,810 ಹಾಗೂ ನೋ ಮ್ಯಾಪಿಂಗ್ 23,083 ಸೇರಿದೆ. ವಿಧಾನಸಭಾ ಕ್ಷೇತ್ರವಾರು ಮಡಿಕೇರಿ ಕ್ಷೇತ್ರದಲ್ಲಿ 18,785 (9,252 + 9,533) ಮತ್ತು ವಿರಾಜಪೇಟೆ ಕ್ಷೇತ್ರದಲ್ಲಿ 40,108 (26,558 + 13,550) ಮಂದಿಗೆ ನೋಟಿಸ್ ಜನರೇಟ್ ಆಗಿದೆ.
ವಿಚಾರಣೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಜಿಲ್ಲೆಯಲ್ಲಿ ಒಟ್ಟು 73 ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಸೆ.8 ರವರೆಗಿನ ಪ್ರಗತಿ:
ದಿನಾಂಕ 08-09-2026 ರವರೆಗಿನ ಅಧಿಕೃತ ನೋಟಿಸ್ ರಿಪೋರ್ಟ್ ಪ್ರಕಾರ, ಒಟ್ಟು 58,884 ನೋಟಿಸ್‌ಗಳಲ್ಲಿ 58,883 ನೋಟಿಸ್ ಜನರೇಟ್ ಆಗಿದೆ. ಇದರಲ್ಲಿ 37,560 ನೋಟಿಸ್ ವಿತರಣೆಯಾಗಿದ್ದು, 21,323 ವಿತರಣೆ ಬಾಕಿ ಇದೆ.
ಕ್ಷೇತ್ರವಾರು ಮಡಿಕೇರಿಯಲ್ಲಿ 18,780ರಲ್ಲಿ 18,779 ಜನರೇಟ್ ಆಗಿದ್ದು, 12,719 ವಿತರಣೆಯಾಗಿ 6,060 ಬಾಕಿ ಇದೆ. ವಿರಾಜಪೇಟೆಯಲ್ಲಿ 40,104 ನೋಟಿಸ್ ಜನರೇಟ್ ಆಗಿದ್ದು, 24,841 ವಿತರಣೆಯಾಗಿ 15,263 ಬಾಕಿ ಇದೆ.
ಅರ್ಹತಾ ದಿನಾಂಕ 01-10-2026 ಆಗಿದ್ದು, 24-08-2026 ರಿಂದ 23-09-2026 ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಬಹುದು. ಹೆಸರು ಸೇರಿಸಲು ನಮೂನೆ-6, ಅನಿವಾಸಿ ಭಾರತೀಯರಿಗೆ ನಮೂನೆ-6ಎ ಹಾಗೂ ಹೆಸರು ತೆಗೆಯಲು ನಮೂನೆ-7 ಮೂಲಕ ಅರ್ಜಿ ಸಲ್ಲಿಸಬಹುದು.